ರಾಯಚೂರು ನಗರ ಸೇರಿದಂತೆ ಜಿಲ್ಲೆಯಾದ್ಯಂತ ಹನುಮ ಜಯಂತಿಯನ್ನು ಶನಿವಾರ ಭಕ್ತಿ ಭಾವದಿಂದ ಆಚರಿಸಲಾಯಿತು.
ನಗರದ ಗಾಂಽ ವೃತ್ತದ ಹನುಮಾನ ದೇವಸ್ಥಾನ,ವೀರಾಂಜನೆಯ, ಸಾರ್ವಜನಿಕ ಉದ್ಯಾನವನದಲ್ಲಿನ ಅಂಜನೆಯ ದೇವಸ್ಥಾನ,ಸತ್ಯಾ ಕಾಲೋನಿ ಹನುಮಾನ ದೇವಸ್ಥಾನ,ಬಿಜನಗೇರಾ ಮಾರ್ಗದ ಉಸುಕಿನ ಹನುಮಾನ ದೇವಸ್ಥಾನ ಸೇರಿ ವಿವಿಧೆಡೆ ಬೆಳಿಗ್ಗೆಯಿಂದಲೇ ಧಾರ್ಮಿಕ ವಿವಿಧಾನಗಳನ್ನು ನೆರವೇರಿಸಿ, ಅಂಜನೆಯ ಸ್ವಾಮಿಗೆ ಜಲಾಭಿಷೆÉÃಕ, ವಿಶೇಷÀ ಪೂಜೆ ಹಾಗೂ ವಿಶೇಷ ವಸ್ತ÷್ರ, ಪುಷಾ ್ಪಲಂಕಾರ ಮಾಡಲಾಗಿತ್ತು.
ಆದರಂತೆ ವೇದಿಕೆ ಕಾರ್ಯಕ್ರಮ,ಭಕ್ತರಿಗಾಗಿ ಅನ್ನಪ್ರಸಾದ, ಕೇಸರಿ ಬಾವುಟಗಳ ಸಹಿತ ಹನುಮನ ಭಾವಚಿತ್ರ ಮೆರವಣಿಗೆ, ರಥೋತ್ಸವ ಹಾಗೂ ತೊಟ್ಟಿಲೋತ್ಸವ ಮಾಡಲಾಯಿತು.\
ಸಂಜೆ ಯುವಕರು ನಗರದ ವಿವಿಧ ವೃತ್ತದಲ್ಲಿ ಅಂಜನೇಯ ಮೂರ್ತಿ ಮೆರವಣಿಗೆ ಮಾಡುವುದರ ಜತೆಗೆ ವಾದ್ಯಮೇಳದ ತಾಳಕ್ಕೆ ಕುಣಿದು ಉತ್ಸಾಹ ತುಂಬಿದರು. ನೂರಾರು ಯುವಕರು ಕೇಸರಿ ಧ್ವಜಗಳೊಂದಿಗೆ ಭಾಗವಹಿಸಿದ್ದರು. ಸುತ್ತಮುತ್ತಲಿನ ಬಡಾವಣೆಗಳಿಂದ ಭಕ್ತರು ಜಯಂತಿಯಲ್ಲಿ ಭಾಗವಹಿಸಿದ್ದರು.