ಕಾನಹೊಸಹಳ್ಳಿ: ಚಿಕ್ಕಜೋಗಿಹಳ್ಳಿ ಶ್ರೀ ರಾಘವೇಂದ್ರಸ್ವಾಮಿಗಳ ಮಠದಲ್ಲಿ ಆರಾಧನಾ ಮಹೋತ್ಸವ ನಿಮಿತ್ತ ರಾಯರ ಬೃಂದಾವನಕ್ಕೆ ಭಾನುವಾರ ವಿಶೇಷ ಪೂಜೆ ಸಲ್ಲಿಸಲಾಯಿತು. ಮಠದ ಪ್ರಾಂಗಣವನ್ನು ವಿದ್ಯುತ್ ದೀಪ, ತಳಿರು ತೋರಣದಿಂದ ಸಿಂಗರಿಸಲಾಗಿತ್ತು. ರಾಯರ ಬೃಂದಾವನಕ್ಕೆ ಬೆಳಗ್ಗೆ ಪೂಜೆ, ಅಭಿಷೇಕ, ಅಷ್ಟೋತ್ತರ ಪಾರಾಯಣ ಮತ್ತು ಮಧ್ಯಾಹ್ನ ಮಹಾಪೂಜೆ ಜರುಗಿದವು. ನಂತರ ಅರಾಧನಾ ಮಹೋತ್ಸವಕ್ಕೆ ಆಗಮಿಸಿದ ಭಕ್ತವೃಂದಕ್ಕೆ ಮಠದವತಿಯಿಂದ ಪ್ರಸಾದ ಸೇವೆ ನಡೆಯಿತು.