special pooja 
ಜಿಲ್ಲೆ

ಭವ್ಯ ರಾಮಮಂದಿರ ನಿರ್ಮಾಣ ಹಿಂದುಗಳ ಕನಸು

ಶಿವರಾಜ.ಎಂ

ವಿಜಯಪುರ: ಅದೆಷ್ಟೋ ಹಿಂದು ಕಾರ್ಯಕರ್ತರ ಬಲಿದಾನ ತ್ಯಾಗದ ಭಾಗವಾಗಿ ಭವ್ಯ ರಾಮಮಂದಿರ ನಿರ್ಮಾಣವಾಗಿದೆ ಎಂದು ವಿಶ್ವ ಹಿಂದು ಪರಿಷದ್, ಬಜರಂಗದಳ ಮುಖಂಡ ವಿ.ಕೃಷ್ಣಮೂರ್ತಿ ಹೇಳಿದರು.
ಅಯೋಧ್ಯದಿಂದ ಬಂದಿರುವ ಪವಿತ್ರ ಮಂತ್ರಾಕ್ಷತೆ ಮತ್ತು ಕರಪತ್ರವನ್ನು ಪಟ್ಟಣದ 8ನೇ ವಾರ್ಡಿನ ಹಿಂದು ಮನೆಗಳಿಗೆ ವಿತರಣೆ ಮಾಡುವ ನಿಟ್ಟಿನಲ್ಲಿ ಶ್ರೀರಾಮ ಮಂದಿರದ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಅಭಿಯಾನಕ್ಕೆ ಚಾಲನೆ ನೀಡಿ, ಮಾತನಾಡಿದರು.
ಸಾವಿರಾರು ವರ್ಷಗಳ ಲಕ್ಷಾಂತರ ಹಿಂದುಗಳ ಕನಸು ನನಸಾಗುತ್ತಿದೆ. ಜ.22ರಂದು ಶ್ರೀರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆ ಮತ್ತು ಭವ್ಯ ಮಂದಿರ ಉದ್ಘಾಟನೆ ನಿಟ್ಟಿನಲ್ಲಿ ಪ್ರತಿ ಹಿಂದು ಮನೆಗಳಿಗೆ ಪವಿತ್ರ ಮಂತ್ರಾಕ್ಷತೆ ಮತ್ತು ಕರಪತ್ರ ತಲುಪಿಸಲಾಗುವುದು ಎಂದು ತಿಳಿಸಿದರು.