ಜಿಲ್ಲೆ

ಸಂಸ್ಕೃತಿಯಲ್ಲಿ ಬೆರೆತು ಈಜುವ ಕಲೆಗಾರಿಕೆ ಮುಖ್ಯ : ಡಾ.ಪುರುಷೋತ್ತಮ ಬಿಳಿಮಲೆ ಅಭಿಮತ

ಸೌಮ್ಯ ಆರ್

ವಿಜಯವಾಣಿ ಸುದ್ದಿಜಾಲ ಹಳೆಯಂಗಡಿ

ನಮ್ಮ ಸುತ್ತಲಿರುವ ಟನೆಗಳನ್ನು ಗಮನಿಸದೆ ನಾವು ಬೇರೆ ಹೋದರೆ ಚರಿತ್ರೆಯಿಂದ ನಾವು ಬೇರ್ಪಡುತ್ತೇವೆ. ಯಾವುದೇ ವಿದ್ಯಾರ್ಥಿ, ಶಿಕ್ಷಕ, ವಿದ್ವಾಂಸ ಚರಿತ್ರೆಯಿಂದ ದೂರ ಹೋಗಿಬಿಡುವರೋ, ಆಗ ಅವರು ನೀರಿನಿಂದ ತೆಗೆದ ಮೀನಿನಂತೆ. ನಾವು ನೀರಿನಿಂದ ತೆಗೆದ ಮೀನಿನಂತೆ ಒದ್ದಾಡಬಾರದು. ನೀರಿನಲ್ಲಿ ಮೀನು ಈಜುವ ಹಾಗೆ ನಾವು ನಮ್ಮ ಸಂಸ್ಕೃತಿಯಲ್ಲಿ ಬೆರೆತು ಈಜುವ ಕಲೆಗಾರಿಕೆಯನ್ನು ಹೊಂದಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಹೇಳಿದರು.

ಹಳೆಯಂಗಡಿ ಶ್ರೀ ನಾರಾಯಣ ಸನಿಲ್ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಇತ್ತೀಚೆಗೆ ಆಯೋಜಿಸಲಾಗಿದ್ದ ‘ಕನ್ನಡ ಕಲರವ’ ವಿಶೇಷ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ವಾತನಾಡಿದರು.

ಸಂಪನ್ಮೂಲ ವ್ಯಕ್ತಿಗಳಾಗಿ ಜೆಸಿಐ ಸಾವ್ರಾಟ್ ಮಂಗಳೂರು ಮೃದು ಕೌಶಲ ತರಬೇತಿದಾರೆ ದೀಪಾ ರಾವ್- ಎಸ್ಸೆಸ್ಸೆಲ್ಸಿ ಪರೀಕ್ಷಾ ಸಿದ್ಧತೆ- ಯಶಸ್ಸಿನ ಸೂತ್ರಗಳು ಮತ್ತು ಭಾರತೀಯ ನೌಕಾದಳದ ನಿವತ್ತ ಸೈನಿಕ ವಿಜಯನ್- ಸೈನ್ಯದಲ್ಲಿ ಉದ್ಯೋಗಾವಕಾಶಗಳು- ಎನ್.ಡಿ.ಎ. ಮತ್ತು ಇತರ ಪರೀಕ್ಷೆಗಳು ಎಂಬ ವಿಷಯಗಳ ಬಗ್ಗೆ ವಿದ್ಯಾರ್ಥಿಗಳಿಗೆ ವಾಹಿತಿ ನೀಡಿದರು.

ಸಂಸ್ಥೆಯ ಸುತ್ತಮುತ್ತಲಿನ ಪ್ರೌಢಶಾಲೆಗಳಾದ ಹಳೆಯಂಗಡಿ ಚಿತ್ರಾಪು, ಸದಾಶಿವ ನಗರ, ಕೆವ್ರಾಲ್ ಮತ್ತು ಎನ್‌ಐಟಿಕೆಯ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು. ಸಂಸ್ಥೆ ನಡೆಸಿದ ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿದ್ಯಾರ್ಥಿಗಳು ಭಾಗವಹಿಸಿದ್ದರು. ವಿಜೇತರಿಗೆ ಬಹುವಾನ ವಿತರಿಸಲಾಯಿತು.

ಕಾಲೇಜು ಪ್ರಾಂಶುಪಾಲೆ ಜಯಶ್ರೀ ಪಿ. ಅಧ್ಯಕ್ಷತೆ ವಹಿಸಿದ್ದರು. ಕಾಲೇಜು ಅಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ಮೋಹನ್ ಸುವರ್ಣ ಮತ್ತು ಸದಸ್ಯ ಹೇಮಚಂದ್ರ ಶೆಟ್ಟಿಗಾರ್ ಉಪಸ್ಥಿತರಿದ್ದರು. ಉಪನ್ಯಾಸಕ ಅನಿಲ್ ಸಿ. ಚೆರಿಯನ್ ಸ್ವಾಗತಿಸಿದರು. ಉಪನ್ಯಾಸಕಿ ಆಶಾಲತಾ ವಂದಿಸಿದರು. ಉಪನ್ಯಾಸಕಿ ಶುಭಲಕ್ಷ್ಮೀ ಮತ್ತು ದಿನಕರ್ ನಿರೂಪಿಸಿದರು.