ಹುಬ್ಬಳ್ಳಿ: ಕನ್ನಡ ಸಾಹಿತ್ಯ ಸಮ್ಮೇಳನ ಅಂಗವಾಗಿ ಹಾವೇರಿಯ ಶ್ರೀ ಮಹಾದೇವಪ್ಪ ಮೈಲಾರ ರೈಲು ನಿಲ್ದಾಣದಲ್ಲಿ ವಿವಿಧ ರೈಲುಗಳಿಗೆ ತಾತ್ಕಾಲಿಕ ನಿಲುಗಡೆ ಸೌಲಭ್ಯ ಒದಗಿಸಲಾಗಿದೆ ಹಾಗೂ ವಿಶೇಷ ರೈಲು ಸಂಚಾರ ಪ್ರಾರಂಭಿಸಲಾಗಿದೆ.
ಜ.5 ರಿಂದ 9ರವರೆಗೆ ಬೆಳಗಿನಜಾವ 2.28/2.30ಕ್ಕೆ ಕೆಎಸ್ಆರ್ ಬೆಂಗಳೂರು- ಬೆಳಗಾವಿ, ರಾತ್ರಿ 11.50/11.52ಕ್ಕೆ ಬೆಳಗಾವಿ - ಕೆಎಸ್ಆರ್ ಬೆಂಗಳೂರು, 7ರಂದು ರಾತ್ರಿ 7.18/ 7.20ಕ್ಕೆ ಯಶವಂತಪುರ - ಚಂಡಿಗಢ, ಚಂಡಿಗಢ- ಯಶವಂತಪುರ, 6ರಂದು ಸಂಜೆ 5.58/6 ಗಂಟೆಗೆ ತಿರುಚಿರಪಲ್ಲಿ- ಶ್ರೀಗಂಗಾನಗರ, 6 ಮತ್ತು 8ರಂದು ಸಂಜೆ 4.50/4.52ಕ್ಕೆ ಯಶವಂತಪುರ- ಬಿಕಾನೆರ, 5ರಂದು ಬೆಳಗ್ಗೆ 9.03/9.05ಕ್ಕೆ ಬಾರ್ಮರ್ -ಯಶವಂತಪುರ ರೈಲುಗಳಿಗೆ ನಿಲುಗಡೆ ಸೌಲಭ್ಯ ಒದಗಿಸಲಾಗಿದೆ.
ವಿಶೇಷ ರೈಲು: ಸಾಹಿತ್ಯ ಸಮ್ಮೇಳನದ ಅಂಗವಾಗಿ ವಿಶೇಷ ರೈಲುಗಳ ಸಂಚಾರ ಪ್ರಾರಂಭಿಸಲಾಗಿದೆ. ಯಶವಂತಪುರ- ಎಸ್ಎಸ್ಎಸ್ ಹುಬ್ಬಳ್ಳಿ -ಯಶವಂತಪುರ ಸ್ಪೆಷಲ್ ಎಕ್ಸ್ಪ್ರೆಸ್ ರೈಲು (ಒಂದು ಟ್ರಿಪ್) ಜ. 5ರಂದು ರಾತ್ರಿ 11.50ಕ್ಕೆ ಯಶವಂತಪುರದಿಂದ ಹೊರಟು, ಮಾರನೇ ದಿನ ಬೆಳಗ್ಗೆ 7.50ಕ್ಕೆ ಎಸ್ಎಸ್ಎಸ್ ಹುಬ್ಬಳ್ಳಿ ನಿಲ್ದಾಣ ತಲುಪುವುದು. 6ರಂದು ಬೆಳಗ್ಗೆ 11.30ಕ್ಕೆ ಎಸ್ಎಸ್ಎಸ್ ಹುಬ್ಬಳ್ಳಿ ನಿಲ್ದಾಣದಿಂದ ಹೊರಡುವ ಈ ರೈಲು, ಅದೇ ದಿನ ರಾತ್ರಿ 7.30ಕ್ಕೆ ಯಶವಂತಪುರ ತಲುಪಲಿದೆ.
ಯಶವಂತಪುರ-ಎಸ್ಎಸ್ಎಸ್ ಹುಬ್ಬಳ್ಳಿ- ಯಶವಂತಪುರ ಸ್ಪೆಷಲ್ ಎಕ್ಸ್ಪ್ರೆಸ್ (1 ಟ್ರಿಪ್) ರೈಲು 6ರಂದು ರಾತ್ರಿ 10.30ಕ್ಕೆ ಯಶವಂತಪುರದಿಂದ ಹೊರಟು, ಮಾರನೇ ದಿನ ಬೆಳಗ್ಗೆ 5.30ಕ್ಕೆ ಎಸ್ಎಸ್ಎಸ್ ಹುಬ್ಬಳ್ಳಿ ನಿಲ್ದಾಣ ತಲುಪಲಿದೆ. 7ರಂದು ಬೆಳಗ್ಗೆ 8.30ಕ್ಕೆ ಎಸ್ಎಸ್ಎಸ್ ಹುಬ್ಬಳ್ಳಿ ನಿಲ್ದಾಣದಿಂದ ಹೊರಡುವ ರೈಲು, ಅದೇ ದಿನ ಸಂಜೆ 5 ಗಂಟೆಗೆ ಯಶವಂತಪುರ ತಲುಪಲಿದೆ.
ಯಶವಂತಪುರ- ಎಸ್ಎಸ್ಎಸ್ ಹುಬ್ಬಳ್ಳಿ ಸ್ಪೆಷಲ್ ಎಕ್ಸ್ಪ್ರೆಸ್ (ಒನ್ ವೇ) ರೈಲು 7ರಂದು ರಾತ್ರಿ 9.50ಕ್ಕೆ ಹೊರಟು, ಮಾರನೇ ದಿನ ಬೆಳಗಿನಜಾವ 5.20ಕ್ಕೆ ಎಸ್ಎಸ್ಎಸ್ ಹುಬ್ಬಳ್ಳಿ ತಲುಪುವುದು.
ಎಸ್ಎಸ್ಎಸ್ ಹುಬ್ಬಳ್ಳಿ- ಎಸ್ಎಂಎಂ ಹಾವೇರಿ ಸ್ಪೆಷಲ್ ಎಕ್ಸ್ಪ್ರೆಸ್ (ಒನ್ ವೇ ರೈಲು) 8ರಂದು ಸಂಜೆ 6 ಗಂಟೆಗೆ ಎಸ್ಎಸ್ಎಸ್ ಹುಬ್ಬಳ್ಳಿ ನಿಲ್ದಾಣದಿಂದ ಹೊರಟು, ರಾತ್ರಿ 7.40ಕ್ಕೆ ಎಸ್ಎಂಎಂ ಹಾವೇರಿ ನಿಲ್ದಾಣ ತಲುಪುವುದು.
ಎಸ್ಎಂಎಂ ಹಾವೇರಿ- ಯಶವಂತಪುರ ಸ್ಪೆಷಲ್ ಎಕ್ಸ್ಪ್ರೆಸ್ (ಒನ್ ವೇ) ರೈಲು 8ರಂದು ರಾತ್ರಿ 11 ಗಂಟೆಗೆ ಹೊರಟು, ಮಾರನೇ ದಿನ ಬೆಳಗಿನಜಾವ 5.20ಕ್ಕೆ ಯಶವಂತಪುರ ತಲುಪಲಿದೆ.