ಜಿಲ್ಲೆ

ಮುಂಬೈ-ಬೆಂಗಳೂರು ಮಧ್ಯೆ ವಿಶೇಷ ರೈಲು ಸಂಚಾರ

ಆನಂದಕುಮಾರ ಅಂಗಡಿ

ಹುಬ್ಬಳ್ಳಿ : ಬೇಸಿಗೆ ರಜೆ ಹಿನ್ನಲೆಯಲ್ಲಿ ಸೆಂಟ್ರಲ್ ರೈಲ್ವೆಯಿಂದ ಮುಂಬೈ-ಬೆಂಗಳೂರು ಮಧ್ಯೆ ವಿಶೇಷ ರೈಲು ಸಂಚಾರ ಪ್ರಾರಂಭಿಸಲಾಗಿದೆ.

ಸಿಎಸ್​ಎಂಟಿ ಮುಂಬೈ-ಎಸ್​ಎಂವಿಟಿ ಬೆಂಂಗಳೂರು- ಸಿಎಸ್​ಎಂಟಿ ಮುಂಬೈ ಮಧ್ಯೆ 13 ಟ್ರಿಪ್ ಈ ವಿಶೇಷ ರೈಲು ಸಂಚರಿಸಲಿದೆ.

ಏಪ್ರಿಲ್ 5, 12, 19, 26, ಮೇ 3, 10, 17, 24, 31, ಜೂನ್ 7, 14, 21, 28ರ ಶನಿವಾರ ಬೆಳಗಿನಜಾವ 12.30ಕ್ಕೆ ಮುಂಬೈನಿಂದ ಹೊರಡುವ ರೈಲು, ಅದೇ ರಾತ್ರಿ 11.55ಕ್ಕೆ ಬೆಂಗಳೂರು ತಲುಪುವುದು.

ಏಪ್ರಿಲ್ 6, 13, 20, 27, ಮೇ 4, 11, 18, 25, ಜೂನ್ 1, 8, 15, 22, 29ರ ಭಾನುವಾರ ಬೆಳಗಿನಜಾವ 4.40ಕ್ಕೆ ಬೆಂಗಳೂರಿನಿಂದ ಹೊರಡುವ ರೈಲು, ಮಾರನೇ ದಿನ ಬೆಳಗಿನಜಾವ 4.05ಕ್ಕೆ ಮುಂಬೈ ತಲುಪಲಿದೆ.

ದಾದರ, ಥಾಣೆ, ಕಲ್ಯಾಣ, ಲೊನಾವಾಲಾ, ಪುಣೆ, ಸತಾರಾ, ಕರಾಡ, ಸಾಂಗ್ಲಿ, ಮಿರಜ, ಕುಡಚಿ, ರಾಯಬಾಗ, ಘಟಪ್ರಭಾ, ಬೆಳಗಾವಿ, ಲೋಂಡಾ, ಧಾರವಾಡ, ಎಸ್​ಎಸ್​ಎಸ್ ಹುಬಳ್ಳಿ, ಎಸ್​ಎಂಎಂ ಹಾವೇರಿ, ರಾಣೆಬೆನ್ನೂರ, ಹರಿಹರ, ದಾವಣಗೆರೆ, ಬಿರೂರ, ಅರಸಿಕೆರೆ ಮತ್ತು ತುಮಕೂರು ನಿಲ್ದಾಣಗಳಲ್ಲಿ ಈ ರೈಲುಗಳಿಗೆ ನಿಲುಗಡೆ ಸೌಲಭ್ಯ ಒದಗಿಸಲಾಗಿದೆ.