ಹುಬ್ಬಳ್ಳಿ : ದೀಪಾವಳಿ ಹಿನ್ನೆಲೆಯಲ್ಲಿ ನೈಋತ್ಯ ರೈಲ್ವೆ ವಲಯ ಹುಬ್ಬಳ್ಳಿ-ಮಡಗಾಂವ-ಬೆಂಗಳೂರು ಮಧ್ಯೆ ವಿಶೇಷ ಒಂದು ಟ್ರಿಪ್ ರೈಲು ಯಶವಂತಪುರ ಮಾರ್ಗದಲ್ಲಿ ಸಂಚಾರ ಪ್ರಾರಂಭಿಸಲಿದೆ.
ಅ. 17ರಂದು ಬೆಳಗಿನಜಾವ 5.15ಕ್ಕೆ ಎಸ್ಎಸ್ಎಸ್ ಹುಬ್ಬಳ್ಳಿ ನಿಲ್ದಾಣದಿಂದ ಹೊರಡುವ ಈ ರೈಲು, ಮಾರನೇ ದಿನ ಬೆಳಗಿನಜಾವ 5.30ಕ್ಕೆ ಮಡಗಾಂವ ತಲುಪಲಿದೆ. ಈ ರೈಲು ಹಾವೇರಿ, ದಾವಣಗೆರೆ, ಹಾಸನ, ಮುಲ್ಕಿ, ಉಡುಪಿ, ಭಟ್ಕಳ, ಮುರಡೇಶ್ವರ, ಕಾರವಾರ ಮೂಲಕ ಸಂಚರಿಸಲಿದೆ.
ಮಡಗಾಂವ-ಬೆಂಗಳೂರು ಕಂಟೋನ್ಮೆಂಟ್ ಎಕ್ಸ್ಪ್ರೆಸ್ ಸ್ಪೇಷಲ್ ರೈಲು ಅ. 18ರಂದು ಬೆಳಗ್ಗೆ 6.30ಕ್ಕೆ ಮಡಗಾಂವನಿಂದ ಹೊರಟು, ಅದೇ ದಿನದ ರಾತ್ರಿ 11.30ಕ್ಕೆ ಬೆಂಗಳೂರು ಕಂಟೋನ್ಮೆಂಟ್ ತಲುಪಲಿದೆ.