ಜಿಲ್ಲೆ

ವಿಶೇಷ ರೈಲು ಸಂಚಾರ

ಆನಂದಕುಮಾರ ಅಂಗಡಿ

ಹುಬ್ಬಳ್ಳಿ: ದಸರಾ ಹಬ್ಬದ ಅಂಗವಾಗಿ ಪ್ರಯಾಣಿಕರ ದಟ್ಟಣೆ ನಿಯಂತ್ರಣಕ್ಕಾಗಿ ನೈಋತ್ಯ ರೈಲ್ವೆ ವಲಯ ಒಂದು ಟ್ರಿಪ್ ವಿಶೇಷ ರೈಲುಗಳ ಸಂಚಾರ ಆರಂಭಿಸಿದೆ.

ಎಸ್​ಎಸ್​ಎಸ್ ಹುಬ್ಬಳ್ಳಿ -ಯಶವಂತಪುರ ಒನ್ ವೇ ಎಕ್ಸ್​ಪ್ರೆಸ್ ಸ್ಪೇಷಲ್ ರೈಲು ಸೆ. 30ರಂದು ಮಧ್ಯಾಹ್ನ 12 ಗಂಟೆಗೆ ಎಸ್​ಎಸ್​ಎ ಹುಬ್ಬಳ್ಳಿ ನಿಲ್ದಾಣದಿಂದ ಹೊರಟು, ಅದೇ ದಿನ ರಾತ್ರಿ 8.15ಕ್ಕೆ ಯಶವಂತಪುರ ನಿಲ್ದಾಣ ತಲುಪಲಿದೆ.

ಯಶವಂತಪುರ-ವಿಜಯಪುರ-ಎಸ್​ಎಂವಿಟಿ ಬೆಂಗಳೂರು ಎಕ್ಸ್​ಪ್ರೆಸ್ ರೈಲು ಸೆ. 30ರಂದು ರಾತ್ರಿ 9.50ಕ್ಕೆ ಯಶವಂತಪುರದಿಂದ ಹೊರಟು, ಮಾರನೇ ದಿನ ಬೆಳಗ್ಗೆ 9.30ಕ್ಕೆ ವಿಜಯಪುರ ತಲುಪಲಿದೆ. ಮರಳಿ ವಿಜಯಪುರದಿಂದ ಅ. 1ರಂದು ಸಂಜೆ 5.30ಕ್ಕೆ ಹೊರಟು, ಮಾರನೇ ದಿನ ಬೆಳಗ್ಗೆ 6.40ಕ್ಕೆ ಎಸ್​ಎಂವಿಟಿ ಬೆಂಗಳೂರು ನಿಲ್ದಾಣ ತಲುಪಲಿದೆ.

ಮತ್ತೊಂದು ಯಶವಂತಪುರ- ವಿಜಯಪುರ-ಎಸ್​ಎಂವಿಟಿ ಬೆಂಗಳೂರು ಎಕ್ಸ್​ಪ್ರೆಸ್ ಸ್ಪೇಷಲ್ ರೈಲು ಅ. 2ರಂದು ರಾತ್ರಿ 7.40ಕ್ಕೆ ಯಶವಂಪುರದಿಂದ ಹೊರಟು, ಮಾರನೇ ದಿನ ಬೆಳಗ್ಗೆ 7.45ಕ್ಕೆ ವಿಜಯಪುರ ತಲುಪಲಿದೆ. ಮರಳಿ ಅ. 3ರಂದು ಸಂಜೆ 5.30ಕ್ಕೆ ವಿಜಯಪುರದಿಂದ ಹೊರಡುವ ರೈಲು, ಮಾರನೇ ದಿನ ಬೆಳಗ್ಗೆ 8.10ಕ್ಕೆ ಎಸ್​ಎಂವಿಟಿ ಬೆಂಗಳೂರು ನಿಲ್ದಾಣ ತಲುಪಲಿದೆ.