ಜಿಲ್ಲೆ

ಸ್ಪೆಷಲ್ ರೈಲು ಸೇವೆ ವಿಸ್ತರಣೆ

Mangaluru - Hariprasad Rai


ಮಂಗಳೂರು : ನೈಋತ್ಯ ರೈಲ್ವೆ ವಿಭಾಗ ವಿಶೇಷ ರೈಲುಗಳ ಸೇವೆಯನ್ನು ವಿಸ್ತರಿಸಿದೆ. ಜ.1ರಿಂದ ಜೂನ್ 30ರವರೆಗೆ ವಿಜಯಪುರದಿಂದ ಮಧ್ಯಾಹ್ನ 3ಕ್ಕೆ ಹೊರಡುವ ವಿಜಯಪುರ-ಮಂಗಳೂರು ಸೆಂಟ್ರಲ್ ಎಕ್ಸ್‌ಪ್ರೆಸ್ ಸ್ಪೆಷಲ್ (ನಂ.07377)ಮರುದಿನ 9.50ಕ್ಕೆ ಮಂಗಳೂರು ಸೆಂಟ್ರಲ್ ತಲುಪಲಿದೆ.
ಜ.2ರಿಂದ ಜು.1ರವರೆಗೆ ಮಂಗಳೂರು ಸೆಂಟ್ರಲ್‌ನಿಂದ ಮಧ್ಯಾಹ್ನ 2.35ಕ್ಕೆ ಹೊರಡುವ ಮಂಗಳೂರು ಸೆಂಟ್ರಲ್-ವಿಜಯಪುರ ಎಕ್ಸ್‌ಪ್ರೆಸ್ ಸ್ಪೆಷಲ್ (ನಂ.07378)ಮರುದಿನ 9.35ಕ್ಕೆ ವಿಜಯಪುರ ತಲುಪಲಿದೆ.