ಮಂಗಳೂರು : ಪ್ರಯಾಣಿಕರ ದಟ್ಟಣೆ ಕಡಿಮೆ ಮಾಡಲು ಮಂಗಳೂರು ಜಂಕ್ಷನ್-ಕೊಚುವೇಲಿ ಮಧ್ಯೆ ಹಾಗೂ ಉಧ್ನಾ ಜಂಕ್ಷನ್-ಮಂಗಳೂರು ಜಂಕ್ಷನ್ ಮಧ್ಯೆ ವಾರದಲ್ಲಿ ಎರಡು ಬಾರಿ ಸ್ಪೆಷಲ್ ರೈಲು ಓಡಾಟ ಮುಂದುವರಿಯಲಿದೆ.
*ಮಂಗಳೂರು ಜಂಕ್ಷನ್-ಕೊಚುವೇಲಿ ಬೈ ವೀಕ್ಲಿ ಸ್ಪೆಷಲ್ ರೈಲು (ನಂ.06041)ಅ.3ರಿಂದ ನ.2ರವರೆಗೆ ಗುರುವಾರ ಮತ್ತು ಶನಿವಾರ ರಾತ್ರಿ 7.30ಕ್ಕೆ ಮಂಗಳೂರು ಜಂಕ್ಷನ್‌ನಿಂದ ಹೊರಟು ಮರುದಿನ ಬೆಳಗ್ಗೆ 8ಕ್ಕೆ ಕೊಚುವೇಲಿ ತಲುಪಲಿದೆ. (10 ಟ್ರಿಪ್)
*ಕೊಚುವೇಲಿ -ಮಂಗಳೂರು ಜಂಕ್ಷನ್ ಬೈ ವೀಕ್ಲಿ ಸ್ಪೆಷಲ್ ರೈಲು (ನಂ.06042)ಅ.4ರಿಂದ ನ.3ರವರೆಗೆ ಶುಕ್ರವಾರ ಮತ್ತು
ಭಾನುವಾರ ಸಾಯಂಕಾಲ 6.40ಕ್ಕೆ ಕೊಚುವೇಲಿಯಿಂದ ಹೊರಟು ಮರುದಿನ ಬೆಳಗ್ಗೆ 7ಕ್ಕೆ ಮಂಗಳೂರು ಜಂಕ್ಷನ್ ತಲುಪಲಿದೆ. (10 ಟ್ರಿಪ್)
*ಉಧ್ನಾ ಜಂಕ್ಷನ್-ಮಂಗಳೂರು ಜಂಕ್ಷನ್ ಬೈ ವೀಕ್ಲಿ ಸ್ಪೆಷಲ್ ರೈಲು (ನಂ.09057)ನ.3ರಿಂದ 2025ರ ಜ.8ರವರೆಗೆ ಬುಧವಾರ ಮತ್ತು ಭಾನುವಾರ ರಾತ್ರಿ 8ಕ್ಕೆ ಉಧ್ನಾ ಜಂಕ್ಷನ್‌ನಿಂದ ಹೊರಟು ಮರುದಿನ ರಾತ್ರಿ 7.45ಕ್ಕೆ ಮಂಗಳೂರು ಜಂಕ್ಷನ್ ತಲುಪಲಿದೆ.
* ಮಂಗಳೂರು ಜಂಕ್ಷನ್-ಉಧ್ನಾ ಜಂಕ್ಷನ್ ಬೈ ವೀಕ್ಲಿ ಸ್ಪೆಷಲ್ ರೈಲು (ನಂ.09058) ನ.4ರಿಂದ 2025ರ ಜ.9ರವರೆಗೆ ಸೋಮವಾರ ಮತ್ತು ಗುರುವಾರ ರಾತ್ರಿ 10.10ಕ್ಕೆ ಮಂಗಳೂರು ಜಂಕ್ಷನ್‌ನಿಂದ ಹೊರಟು ಮರುದಿನ ರಾತ್ರಿ 11.05ಕ್ಕೆ ಉಧ್ನಾ ಜಂಕ್ಷನ್ ತಲುಪಲಿದೆ ಎಂದು ಪ್ರಕಟಣೆ ತಿಳಿಸಿದೆ.
......................