ಮಂಗಳೂರು : ಪಶ್ಚಿಮ ರೈಲ್ವೆ ಚೌತಿ ಹಬ್ಬದ ಸಂದರ್ಭ ವಿಶೇಷ ರೈಲು ಸಂಚಾರ ಸೌಲಭ್ಯ ಕಲ್ಪಿಸಿದೆ. ಸೆ. 6 , 13 ಮತ್ತು 20ರಂದು ಸಾಯಂಕಾಲ 4ಕ್ಕೆ ಅಹ್ಮದಾಬಾದ್ ಜಂಕ್ಷನ್‌ನಿಂದ ಹೊರಡುವ ಅಹ್ಮದಾಬಾದ್ ಜಂಕ್ಷನ್-ಮಂಗಳೂರು ಜಂಕ್ಷನ್ ಫೆಸ್ಟಿವಲ್ ಸ್ಪೆಷಲ್ (ರೈಲು ನಂ.09424) ರೈಲು ಮರುದಿನ ರಾತ್ರಿ 7.45ಕ್ಕೆ ಮಂಗಳೂರು ಜಂಕ್ಷನ್ ತಲುಪಲಿದೆ.
ಸೆ. 7,14ಮತ್ತು 21ರಂದು ರಾತ್ರಿ 10.10ಕ್ಕೆ ಮಂಗಳೂರು ಜಂಕ್ಷನ್‌ನಿಂದ ಹೊರಡುವ ಮಂಗಳೂರು ಜಂಕ್ಷನ್- ಅಹ್ಮದಾಬಾದ್ ಜಂಕ್ಷನ್ ಫೆಸ್ಟಿವಲ್ ಸ್ಪೆಷಲ್ (ರೈಲು ನಂ.09423) ರೈಲು ಮರುದಿನ ರಾತ್ರಿ 2.25ಕ್ಕೆ ಅಹ್ಮದಾಬಾದ್ ಜಂಕ್ಷನ್ ತಲುಪಲಿದೆ.
ಈ ರೈಲು 2 -ಎಸಿ ತ್ರಿ ಟಯರ್ ಕೋಚ್, 12-ಸ್ಲೀಪರ್ ಕ್ಲಾಸ್ ಕೋಚ್, 4-ಜನರಲ್ ಸೆಕೆಂಡ್ ಕ್ಲಾಸ್ ಕೋಚ್ ಮತ್ತು 2 -ಸೆಕೆಂಡ್ ಕ್ಲಾಸ್ ಕೋಚ್ (ದಿವ್ಯಾಂಗರಿಗೆ) ಹೊಂದಿದೆ ಎಂದು ಪ್ರಕಟಣೆ ತಿಳಿಸಿದೆ.