ಮಂಗಳೂರು : ಪ್ರಯಾಣಿಕರ ದಟ್ಟಣೆ ಕಡಿಮೆಗೊಳಿಸಲು ತಾಂಬರಂ-ಮಂಗಳೂರು ಜಂಕ್ಷನ್ ಮಧ್ಯೆ ವಿಶೇಷ ರೈಲುಗಳು ಓಡಾಟ ನಡೆಸಲಿವೆ.
ತಾಂಬರಂ-ಮಂಗಳೂರು ಜಂಕ್ಷನ್ ಬೈ ವೀಕ್ಲಿ ಸ್ಪೆಷಲ್ (ರೈಲು ನಂ.06047) ಜೂ.9,14,16,21,23 ,28 ಮತ್ತು 30ರಂದು ಮಧ್ಯಾಹ್ನ 1.55ಕ್ಕೆ ತಾಂಬರಂ ರೈಲ್ವೆ ನಿಲ್ದಾಣದಿಂದ ಹೊರಡಲಿದ್ದು, ಮರು ದಿನ ಬೆಳಗ್ಗೆ 6.55ಕ್ಕೆ ಮಂಗಳೂರು ಜಂಕ್ಷನ್ ತಲುಪಲಿದೆ.
ಮಂಗಳೂರು ಜಂಕ್ಷನ್-ತಾಂಬರಂ ಜಂಕ್ಷನ್ ಬೈ ವೀಕ್ಲಿ ಸ್ಪೆಷಲ್ (ರೈಲು ನಂ.06048) ಜೂ. 10, 15, 16,22,24 ,29 ಮತ್ತು ಜುಲೈ 1ರಂದು ಮಧ್ಯಾಹ್ನ 12ಕ್ಕೆ ಮಂಗಳೂರು ಜಂಕ್ಷನ್ ರೈಲ್ವೆ ನಿಲ್ದಾಣದಿಂದ ಹೊರಡಲಿದ್ದು, ಮರು ದಿನ ಮುಂಜಾನೆ 4.45ಕ್ಕೆ ತಾಂಬರಂ ರೈಲ್ವೆ ನಿಲ್ದಾಣ ತಲುಪಲಿದೆ.
ಈ ರೈಲು 14 ತ್ರಿ ಟಯರ್ ಎಕಾನಮಿ ಎ.ಸಿ.ಕೋಚ್‌ಗಳು, 1 ಸೆಕೆಂಡ್ ಕ್ಲಾಸ್ ಲಗ್ಗೇಜ್ ಕಂ ಬ್ರೇಕ್ ವ್ಯಾನ್ ಮತ್ತು 1 ಜನರೇಟರ್ ಕಾರ್ ಕೋಚ್ ಹೊಂದಿದೆ ಎಂದು ಪ್ರಕಟಣೆ ತಿಳಿಸಿದೆ.