ತ್ಯಾಗರ್ತಿ ಸಮೀಪದ ಚಿಕ್ಕಬಿಲಗುಂಜಿ ಈರಣ್ಣನ ಗುಡ್ಡದ ವೀರಭದ್ರೇಶ್ವರ ಸ್ವಾಮಿ ದೇವಾಲಯದಲ್ಲಿ ಎಳ್ಳಮಾವಾಸ್ಯೆ ಪ್ರಯುಕ್ತ ಆಯೋಜಿಸಿದ್ದ ವಿಶೇಷ ಪೂಜೆಯಲ್ಲಿ ಪಾಲ್ಗೊಂಡಿದ್ದ ಭಕ್ತರು.  
ಜಿಲ್ಲೆ

ವೀರಭದ್ರೇಶ್ವರ ಸ್ವಾಮಿಗೆ ವಿಶೇಷ ಪೂಜೆ

Shivamogga - Desk - Vinayakumar D B

ತ್ಯಾಗರ್ತಿ: ಎಳ್ಳಮಾವಾಸ್ಯೆ ಪ್ರಯುಕ್ತ ಸಮೀಪದ ಚಿಕ್ಕಬಿಲಗುಂಜಿ ಗ್ರಾಮದ ಈರಣ್ಣನ ಗುಡ್ಡದ ದಟ್ಟ ಕಾಡಿನಲ್ಲಿರುವ ಶ್ರೀ ವೀರಭದ್ರೇಶ್ವರ ಸ್ವಾಮಿ ದೇವಾಲಯದಲ್ಲಿ ಗುರುವಾರ ಕಾರ್ತಿಕ ದೀಪೋತ್ಸವ ಹಾಗೂ ವಾರ್ಷಿಕ ವಿಶೇಷ ಪೂಜೆ ನೆರವೇರಿಸಲಾಯಿತು.

ಜಿಲ್ಲೆಯ ವಿವಿಧ ಭಾಗಗಳಿಂದ ಸಾವಿರಾರು ಭಕ್ತರು ಆಗಮಿಸಿದ್ದರು. ಸ್ವಾಮಿಗೆ ಅಕ್ಕಿ, ಹಣ್ಣು ಕಾಯಿ, ಹೊರೆ ಕಾಣಿಕೆ ಸಮರ್ಪಣೆ ಮಾಡಿದರು. ತಾಳಗುಪ್ಪ ಕೂಡ್ಲಿ ಮಠದ ಶ್ರೀ ಸಿದ್ಧವೀರ ಸ್ವಾಮೀಜಿ ಪೂಜಾ ಕೈಂಕರ್ಯದ ನೇತೃತ್ವ ವಹಿಸಿದ್ದರು. ಧಾರ್ಮಿಕ ಕಾರ್ಯಕ್ರಮ ಕಾರ್ತಿಕ ದೀಪೋತ್ಸವದ ನಂತರ ಶ್ರೀಗಳು ಭಕ್ತರನ್ನು ಆಶೀರ್ವದಿಸಿದರು.