ತರೀಕೆರೆಯ ವಿವಿಧ ಗ್ರಾಮಗಳ ಗ್ರಾಮಸ್ಥರು ಮಳೆಗಾಗಿ ಪ್ರಾರ್ಥಿಸಿ ಹಣ್ಣೆ ಬೆಟ್ಟದ ಋಷ್ಯ ಶೃಂಗೇಶ್ವರ ರಂಗನಾಥ ಸ್ವಾಮಿಗೆ ಪೂಜೆ ಸಲ್ಲಿಸಿರುವುದು. 
ಜಿಲ್ಲೆ

ಮಳೆಗಾಗಿ ಋಷ್ಯ ಶೃಂಗೇಶ್ವರ ಸ್ವಾಮಿಗೆ ವಿಶೇಷ ಪೂಜೆ

ಜಿ.ಹೆಚ್. ಧನ್ಯಕುಮಾರ್

ತರೀಕೆರೆ: ತಾಲೂಕಿನ ವಿವಿಧೆಡೆ ವರ್ಷಧಾರೆಯಾದರೂ ಹಾದಿಕೆರೆ, ಲಕ್ಷ್ಮೀಸಾಗರ, ಎಚ್.ಮಲ್ಲೇನಹಳ್ಳಿ, ಇಟ್ಟಿಗೆ ಹಾಗೂ ಯರೇಹಳ್ಳಿ ಗ್ರಾಮದಲ್ಲಿ ಈವರೆಗೆ ವರುಣಾನ ಅಗಮನವಾಗದ ಹಿನ್ನೆಲೆಯಲ್ಲಿ ಸೋಮವಾರ ಐದು ಊರಿನ ಜನ ಋಷಿಪುರದ ಋಷ್ಯ ಶೃಂಗೇಶ್ವರ ಮತ್ತು ಅಜ್ಜಂಪುರ ಸನಿಹದ ಹಣ್ಣೆ ಬೆಟ್ಟಕ್ಕೆ ತೆರಳಿ ಏಕಕಾಲದಲ್ಲಿ ಮಳೆಗಾಗಿ ಪ್ರಾರ್ಥಿಸಿ ಪೂಜೆ ಸಲ್ಲಿಸಿದರು.
ಯರೇಹಳ್ಳಿಯ ಗ್ರಾಮದೇವತೆಗಳಾದ ಶ್ರೀ ಬಸವೇಶ್ವರ ಸ್ವಾಮಿ ಮತ್ತು ಶ್ರೀ ಕೆಂಚರಾಯ ಸ್ವಾಮಿ ಅಪ್ಪಣೆ ಮೇರೆಗೆ ಗಂಗಮ್ಮನ ಕೊಳ್ಳದಿಂದ ತಂದ ಗಂಗೆ ಪೂಜಿಸಿ ಎರಡೂ ಬೆಟ್ಟಗಳಿಗೆ ಗಂಗೆ ಹೊತ್ತು ಪ್ರತ್ಯೇಕವಾಗಿ ತೆರಳಿದ ಗ್ರಾಮಸ್ಥರು ಋಷಿಪುರದ ಋಷ್ಯ ಶೃಂಗೇಶ್ವರ ಹಾಗೂ ಹಣ್ಣೆ ಬೆಟ್ಟದ ಋಷ್ಯ ಶೃಂಗೇಶ್ವರ ರಂಗನಾಥ ಸ್ವಾಮಿಗೆ ಪಂಚಾಮೃತ, ರುದ್ರಾಭಿಷೇಕ ನೆರವೇರಿಸಿದರು. ನಂತರ ಅಷ್ಟೋತ್ತರ ಪಠಿಸಿ ವಿಶೇಷ ಪೂಜೆ ಸಲ್ಲಿಸಿ ಮಳೆಗಾಗಿ ಪ್ರಾರ್ಥಿಸಿದರು.
ಗ್ರಾಪಂ ಸದಸ್ಯ ವೈ.ಎಚ್.ಅರುಣ್‌ಕುಮಾರ್, ಮಂಜುನಾಥ, ರಾಜು, ರೇಣುಕಾರಾಧ್ಯ, ರಘು, ರವಿ, ರಂಗಪ್ಪ, ಇ.ಸತೀಶ್, ಇ.ಟಿ.ಗಿರೀಶ್, ಸುನೀಲ್, ವೀರಭದ್ರಪ್ಪ, ನಂಜುಂಡಪ್ಪ, ರೇಣುಕಯ್ಯ ಮತ್ತಿತರರಿದ್ದರು.