ಜಿಲ್ಲೆ

22ರಂದು ಶ್ರೀರಾಮನಿಗೆ ವಿಶೇಷ ಪೂಜೆ

ಮದ್ದೂರು: ಪಟ್ಟಣದ ಶಿವಪುರದಲ್ಲಿ 1994 ರಂದು ಉಡುಪಿಯ ಪೇಜಾವರ ಮಠದ ಶ್ರೀ ವಿಶ್ವೇಶ್ವರತೀರ್ಥ ಸ್ವಾಮೀಜಿ ಅವರಿಂದ ಪ್ರತಿಷ್ಠಾಪಿಸ್ಟಲ್ಪಟ್ಟ ಶ್ರೀರಾಮ ದೇವರಿಗೆ ಜ. 22 ರಂದು ವಿಶೇಷ ಪೂಜಾ ಕೈಂಕರ್ಯಗಳನ್ನು ಹಮ್ಮಿಕೊಳ್ಳಲಾಗಿದೆ.

ಅಯೋಧ್ಯೆಯ ಶ್ರೀರಾಮ ಮಂದಿರದ ದೇವಸ್ಥಾನದಲ್ಲಿ ಬಾಲ ಶ್ರೀರಾಮ ದೇವರ ಮೂರ್ತಿಯ ಪ್ರತಿಷ್ಠಾಪನೆ ಇರುವುದರಿಂದ ಸೋಮವಾರ ಶ್ರೀರಾಮ ಮಂದಿರದಲ್ಲಿ ಬೆಳಗ್ಗೆಯಿಂದಲೇ ಅಭಿಷೇಕ, ಹೋಮ, ಹವನಗಳು ನಡೆಯಲಿದ್ದು, ಮಧ್ಯಾಹ್ನ 12 ಗಂಟೆಗೆ ಮಹಾಮಂಗಳಾರತಿ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ. ಜತೆಗೆ ಊರಿನ ಪ್ರತಿಯೊಂದು ಬೀದಿಗಳಲ್ಲೂ ದೀಪಾಲಂಕಾರ ಏರ್ಪಡಿಸಿದ್ದು ಸಂಜೆ 6 ಗಂಟೆಗೆ ಶ್ರೀ ರಾಮದೇವರ ಪಲ್ಲಕ್ಕಿ ಉತ್ಸವವದ ಮೆರವಣಿಗೆ ಊರಿನ ಪ್ರಮುಖ ಬೀದಿಗಳಲ್ಲಿ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.