ಕಾವೇರಿ ಮಾತೆಗೆ ವಿಶೇಷ ಪೂಜೆ ನೆರವೇರಿಸಲಾಯಿತು. ಬೇಬಿಂದ್ರ ಪ್ರಸಾದ್, ವಿಜೇಂದ್ರ ಪ್ರಸಾದ್, ರವೀಂದ್ರ ಪ್ರಸಾದ್, ಚಂದ್ರು, ಸೋಮಶೇಖರ್ ಇದ್ದರು. 
ಜಿಲ್ಲೆ

ಕಾವೇರಿ ಮಾತೆಗೆ ವಿಶೇಷ ಪೂಜೆ

ನಾಗೇಶ ಎಸ್

ಬೈಲುಕುಪ್ಪೆ: ಕಾವೇರಿ ಮಾತೆಗೆ ಹುಣ್ಣಿಮಿ ದಿನ ವಿಶೇಷ ಪೂಜೆ ನಡೆಸಿಕೊಂಡು ಬರಲಾಗುತ್ತಿತ್ತು. ಆದರೆ ಚಂದ್ರ ಗ್ರಹಣ ಹಿನ್ನೆಲೆಯಲ್ಲಿ ಸೋಮವಾರ ವಿಶೇಷ ಪೂಜೆ ನೆರವೇರಿಸಲಾಯಿತು.

ಪಿರಿಯಾಪಟ್ಟಣ ತಾಲೂಕಿನ ಕೊಪ್ಪ ಬಿಎಂ ರಸ್ತೆ ಪಕ್ಕದಲ್ಲಿ ಕಾವೇರಿ ಕನ್ನಡ ಸಂಘದ ವತಿಯಿಂದ 12 ಅಡಿ ಎತ್ತರ ನಿರ್ಮಿಸಲಾಗಿರುವ ಕಾವೇರಿ ದಾನಿಗಳಾದ ಮಾತೆಗೆ ಬೆಂಗಳೂರಿನ ಸುನಂದಾ ಕೌಶಿಕ್ ಕುಟುಂಬದವರಿಂದ ಸಂಘದ ಅಧ್ಯಕ್ಷ ಬೇಬಿಂದ್ರ ಪ್ರಸಾದ್ ಸಮ್ಮುಖದಲ್ಲಿ ಅರ್ಚಕ ಪ್ರಸನ್ನ ಭಟ್ಟ ಅವರು ಪೂಜೆ ನೆರವೇರಿಸಿದರು. ನದಿಯಿಂದ ನೀರನ್ನು ತಂದು ಕಾವೇರಿ ಮಾತೆ ಸ್ವಚ್ಛಗೊಳಿಸಿ ದೇವಸ್ಥಾನಕ್ಕೆ ತಳಿರು-ತೋರಣ ಹಾಗೂ ವಿವಿಧ ದೀಪ ಅಲಂಕಾರ ನೆರವೇರಿಸಲಾಯಿತು. ಹಾಲು, ಜೇನು ತುಪ್ಪದಿಂದ ನೈವೇದ್ಯ ಮಾಡಿ, ಹೊಸ ಸೀರೆ, ಕುಪ್ಪಸ, ಒಡವೆಗಳನ್ನು ಧರಿಸಿ, ವಿವಿಧ ಹೂವು ಹಾರಗಳಿಂದ ಅಲಂಕರಿಸಿ ಮಹಾಮಂಗಳಾರತಿ ನೆರವೇರಿಸಲಾಯಿತು.

ಕಾವೇರಿ ಕನ್ನಡ ಸಂಘದ ಸದಸ್ಯರಾದ ರವೀಂದ್ರ ಪ್ರಸಾದ್, ವಿಜೇಂದ್ರ ಪ್ರಸಾದ್, ಚಂದ್ರು, ರುದ್ರೇಶ್, ಅವರ್ತಿ ಸೋಮಶೇಖರ್, ಚಂದ್ರು ಇದ್ದರು.