ಮಂಡ್ಯ: ತಾಲೂಕಿನ ಹೊಳಲು ಗ್ರಾಮದ ತಾಂಡವೇಶ್ವರ ದೇವಸ್ಥಾನದಲ್ಲಿ ಎರಡನೇ ಕಾರ್ತಿಕ ಸೋಮವಾರ ಅಂಗವಾಗಿ ವಿಶೇಷ ಪೂಜೆ ಸಂಭ್ರಮದಿಂದ ನಡೆಯಿತು.
ತಾಂಡವೇಶ್ವರಸ್ವಾಮಿಗೆ ವಿಶೇಷವಾಗಿ ಹೂವಿನ ಅಲಂಕಾರ ಮಾಡಲಾಗಿತ್ತು. ಕ್ಷೀರಾಭಿಷೇಕ, ರುದ್ರಾಭಿಷೇಕ, ಕುಂಕುಮಾರ್ಚನೆ ಹಾಗೂ ದೇವಸ್ಥಾನದ ಒಳಗಡೆ ಪಾರ್ವತಿದೇವಿ, ನಾಗರಕಲ್ಲು, ಲಕ್ಷ್ಮೀವೆಂಕಟೇಶ್ವರ ದೇವರಿಗೆ ಪೂಜೆ ನೆರವೇರಿಸಲಾಯಿತು. ರಾಜ್ಯ ಒಕ್ಕಲಿಗರ ಸಂಘದ ಮಾಜಿ ಉಪಾಧ್ಯಕ್ಷ ಎಚ್.ಎಲ್.ಶಿವಣ್ಣ ಅವರಿಂದ ಅನ್ನದಾಸೋಹ ಆಯೋಜಿಸಲಾಗಿತ್ತು.
ದೇವಸ್ಥಾನದ ಅರ್ಚಕ ವಿಶ್ವನಾಥ್ ದೀಕ್ಷಿತ್ ಮಾತನಾಡಿ, ತಾಂಡವಶ್ವರ ಸ್ವಾಮಿಯ ದೇವಸ್ಥಾನಕ್ಕೆ ಬೇರೆಯ ಜಿಲ್ಲೆಗಳಿಂದ ಬಂದು ಪೂಜೆ ನೆರವೇರಿಸಿ ಹೋಗುತ್ತಾರೆ. ಕಾರ್ತಿಕ ಮಾಸದಲ್ಲಿ ಪೂಜೆ ಸಲ್ಲಿಸಿದರೆ ಒಳ್ಳೆಯದಾಗುತ್ತದೆ ಎಂಬ ನಂಬಿಕೆ ಇದೆ ಎಂದು ಹೇಳಿದರು. ಮಾಜಿ ಶಾಸಕ ಎಚ್.ಬಿ.ರಾಮು, ಹರಿಪ್ರಸಾದ್, ತಾಂಡವೇಶ್, ಶ್ರೀಧರ್, ಜಟ್ಟಿ ಕುಮಾರ್, ಪುಟ್ಟಸ್ವಾಮಿ, ತಾಂಡವಶ್ವರ ದೇವಾಲಯದ ಅಭಿವೃದ್ಧಿ ಸಮಿತಿ ಅಧ್ಯಕ್ಷ ಎಚ್.ಎಸ್.ಮೋಹನ್‌ಕುಮಾರ್, ಉಪಾಧ್ಯಕ್ಷ ಎಚ್.ಬಿ.ದೊಡ್ಡೇಗೌಡ, ಕಾರ್ಯದರ್ಶಿ ಎಸ್.ಕೃಷ್ಣ, ಸದಸ್ಯರಾದ ಚಿಕ್ಕೇಗೌಡ, ಶಿವಣ್ಣ, ಶಿವಲಿಂಗಯ್ಯ, ಅನುಸೂಯ, ಅರ್ಚಕರಾದ ಪ್ರದೀಪ್ ದೀಕ್ಷಿತ್, ಮನು ದೀಕ್ಷಿತ್ ಇದ್ದರು.