ಜಿಲ್ಲೆ

ತೀರ್ಥಂಕರರಿಗೆ ವಿಶೇಷ ಪೂಜೆ ಇಂದು

ಆನಂದಕುಮಾರ ಅಂಗಡಿ

ಹುಬ್ಬಳ್ಳಿ : ಜೈನ ಪರಂಪರೆಯ 23ನೇ ತೀರ್ಥಂಕರರಾದ ಪಾರ್ಶ್ವನಾಥರ ಮೋಕ್ಷ ದಿನದ ಅಂಗವಾಗಿ ಆ. 11ರಂದು ಹುಬ್ಬಳ್ಳಿಯ ಎಲ್ಲ ಜಿನಮಂದಿರಗಳಲ್ಲಿ ತೀರ್ಥಂಕರರಿಗೆ ವಿಶೇಷ ಪೂಜೆ ಆಯೋಜಿಸಲಾಗಿದೆ.

ಈ ಹಿನ್ನೆಲೆಯಲ್ಲಿ ಇಲ್ಲಿನ ಸ್ಟೇಷನ್ ರಸ್ತೆಯ ದಿಗಂಬರ ಜೈನ ಬೋರ್ಡಿಂಗ್​ನಲ್ಲಿ ಚಾತುರ್ವಸ ಆಚರಿಸುತ್ತಿರುವ ದಿಗಂಬರ ಸಂತ ಮುನಿಶ್ರೀ ಪುಣ್ಯಸಾಗರ ಮಹಾರಾಜರ ಸಾನ್ನಿಧ್ಯದಲ್ಲಿ ವಿಶೇಷ ಪೂಜೆ, ಶ್ರೀ ಪಾರ್ಶ್ವನಾಥ ವಿಧಾನ, ನಂತರ 24 ಪಾಲಕಿಗಳಲ್ಲಿ ಜಿನಬಿಂಬಗಳ ಶೋಭಾಯಾತ್ರೆ, 24 ಜಿನಬಿಂಬಗಳ ಅಭಿಷೇಕ, 23 ಕೆಜಿ ತೂಕದ ಲಾಡು ಅರ್ಪಣೆ, ಮುನಿಶ್ರೀಗಳ ಪ್ರವಚನ, ಆರತಿ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ.