ಮದ್ದೂರು ತಾಲೂಕಿನ ಆಬಲವಾಡಿ ಗ್ರಾಮದ ಶ್ರೀ ಮಹದೇಶ್ವರ ಸ್ವಾಮಿಯ ಜಾತ್ರ ಮಹೋತ್ಸವ ದ ಅಂಗವಾಗಿ ಹುಲಿವಾಹನೋತ್ಸವ ಹಮ್ಮಿಕೊಳ್ಳಲಾಗಿತ್ತು.  
ಜಿಲ್ಲೆ

ಜಾತ್ರ ಮಹೋತ್ಸವದ ವಿಶೇಷ ಪೂಜೆ

ರವಿಕುಮಾರ್ ಪಿ. ಕೆ

ಮದ್ದೂರು: ತಾಲೂಕಿನ ಆಬಲವಾಡಿ ಗ್ರಾಮದ ಶ್ರೀ ಮಹದೇಶ್ವರ ಸ್ವಾಮಿಯ ಜಾತ್ರ ಮಹೋತ್ಸವ ದ ಅಂಗವಾಗಿ ಶನಿವಾರ ದೇಗುಲದಲ್ಲಿ ವಿಶೇಷ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.

ಜಾತ್ರಾ ಮಹೋತ್ಸವದ ಅಂಗವಾಗಿ ಸ್ವಾಮಿಗೆ ಬೆಣ್ಣೆ ಆಲಂಕಾರ, ಹುಲಿವಾಹನೋತ್ಸವ ಸೇರಿದಂತೆ ಇನ್ನಿತರ ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಆಗಮಿಸಿದ ಭಕ್ತಾಧಿಗಳಿಗೆ ತೀರ್ಥ, ಪ್ರಸಾದ ವಿತರಣೆ ಮಾಡಲಾಯಿತು.

ಗ್ರಾಮದ ಯಾಜಮಾನರಾದ ವೀರಣ್ಣ, ಜಯರಾಮ್, ಗೋವಿಂದಯ್ಯ, ರಮೇಶ್, ರಾಜ್ಯ ಯುವಪ್ರಶಸ್ತಿ ಪುರಸ್ಕೃತ ಅನಿಲ್, ಮುಖಂಡರಾದ ಚೇತನ್, ಸಂತೋಷ್, ಸಂಜಯ್, ರವಿ , ಜಗದೀಶ್, ತಿಮ್ಮೇಶ್, ರಕ್ಷಿತ್, ಅರುಣ್, ಪವನ್ ಇದ್ದರು.