ಜಿಲ್ಲೆ

ದಸರಾ ಗಜಪಡೆಗೆ ವಿಶೇಷ ಪೂಜೆ

ಮೈಸೂರು: ಗಣೇಶ ಚತುರ್ಥಿ ಪ್ರಯುಕ್ತ ಬುಧವಾರ ಅರಮನೆ ಆವರಣದಲ್ಲಿ ದಸರಾ ಗಜಪಡೆಗೆ ಪೂಜೆ ಸಲ್ಲಿಸಲಾಯಿತು.

ವೀರನಗೆರೆ ಗಣಪತಿ ದೇವಸ್ಥಾನದ ಅರ್ಚಕ ಪ್ರಹ್ಲಾದ್ ಅವರು ಆನೆಗಳ ಪಾದ ತೊಳೆದು, ಹಣೆಗೆ ಕುಂಕುಮ ಇಟ್ಟು ಪೂಜೆ ಸಲ್ಲಿಸಿದರು. ಈ ಸಂದರ್ಭ ಆನೆಗಳಿಗೆ ಬೆಲ್ಲ, ಕಬ್ಬು, ಹಣ್ಣು ಹಂಪಲುಗಳನ್ನು ನೀಡಲಾಯಿತು. ಈ ಸಂದರ್ಭ ಡಿಸಿಎಫ್‌ಗಳಾದ ಕರಿಕಾಳನ್, ಕಮಲಾ ಕರಿಕಾಳನ್ ಹಾಗೂ ಇತರರು ಇದ್ದರು.