ತಿ.ನರಸೀಪುರ ಪಟ್ಟಣದ ಕಡ್ಲೇ ರಂಗಮ್ಮನ ಬೀದಿಯ ಶ್ರೀ ಶನೈಶ್ಚರಸ್ವಾಮಿ ದೇವಸ್ಥಾನದಲ್ಲಿ ಶ್ರಾವಣ ಮಾಸದ ಪ್ರಥಮ ಶನಿವಾರ ಪ್ರಯುಕ್ತ ಆನಂದ್ ಗುಡ್ಡಪ್ಪ ಅವರು ವಿಶೇಷ ಪೂಜಾ ಕೈಂಕರ್ಯಗಳನ್ನು ನೆರವೇರಿಸಿದರು. 
ಜಿಲ್ಲೆ

ಶ್ರೀ ಶನೈಶ್ಚರಸ್ವಾಮಿ ದೇಗುಲದಲ್ಲಿ ವಿಶೇಷ ಪೂಜೆ

ತಿ.ನರಸೀಪುರ: ಪಟ್ಟಣದ ಕಡ್ಲೇ ರಂಗಮ್ಮನ ಬೀದಿಯ ಶ್ರೀ ಶನೈಶ್ಚರಸ್ವಾಮಿ ದೇವಸ್ಥಾನದಲ್ಲಿ ಶ್ರಾವಣ ಮಾಸದ ಪ್ರಥಮ ಶನಿವಾರ ಪ್ರಯುಕ್ತ ವಿಶೇಷ ಪೂಜಾ ಕೈಂಕರ್ಯಗಳು ನಡೆದವು.


ದೇಗುಲದಲ್ಲಿ ಕಳಸ ಸ್ಥಾಪನೆ ಮಾಡಿ ಶ್ರೀ ಶನೈಶ್ಚರಸ್ವಾಮಿ ಪಟಕ್ಕೆ ಹೂವಿನ ಅಲಂಕಾರದೊಂದಿಗೆ ಆನಂದ್ ಗುಡ್ಡಪ್ಪ ಅವರು ಪೂಜೆ ನೆರವೇರಿಸಿದರು. ಎಳ್ಳು ಪ್ರಸಾದ ವಿತರಣೆ ಮಾಡಲಾಯಿತು. ಭಕ್ತರಿಗೆ ಅನ್ನ ದಾಸೋಹ ಮಾಡಲಾಯಿತು.