ಜಿಲ್ಲೆ

ಸಾಯಿಬಾಬಾ ಮಂದಿರದಲ್ಲಿ ವಿಶೇಷ ಪೂಜೆ

ಪ್ರಸಿನ್ ಕೆ.ಆರ್

ಚನ್ನರಾಯಪಟ್ಟಣ: ಗುರು ಪೂರ್ಣಿಮೆ ಹಿನ್ನೆಲೆ ಪಟ್ಟಣದ ಡಾ.ಮಂಜುನಾಥ್ ನಗರದಲ್ಲಿರುವ ಶ್ರೀ ಶಿರಡಿ ಸಾಯಿಬಾಬಾ ಮಂದಿರದಲ್ಲಿ ವಿಶೇಷ ಪೂಜೆ, ಪ್ರಾರ್ಥನೆ ನಡೆಯಿತು. ಪಟ್ಟಣ ಸೇರಿದಂತೆ ಹೋಬಳಿ ಕೇಂದ್ರದಿಂದಲೂ ಬಂದು ಭಕ್ತರು ದರ್ಶನ ಪಡೆದರು.

ಸಾಯಿಬಾಬಾ ಮೂರ್ತಿಗೆ ಬೆಳ್ಳಿ , ಕಿರೀಟ ಧಾರಣೆ ಮಾಡಿ ವಿವಿಧ ಪುಷ್ಪಗಳಿಂದ ಸಿಂಗರಿಸಲಾಗಿತ್ತು. ಭಕ್ತರು ಮಂಗಳಾರತಿ ಮಾಡುವ ಸಂದರ್ಭದಲ್ಲಿ ಸಾಯಿಬಾಬಾ ಕುರಿತಾದ ಹಾಡುಗಳೊಂದಿಗೆ ಪ್ರಾರ್ಥನೆ ಮಾಡಲಾಯಿತು. ಬೆಳಗ್ಗೆಯಿಂದ ರಾತ್ರಿವರೆಗೆ ವಿವಿಧ ಭಜನಾ ಮಂಡಳಿಗಳಿಂದ ಭಜನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಗುರು ಪೂರ್ಣಿಮೆ ಆಚರಣೆ ಹಿನ್ನೆಲೆ ಬೆಳಗ್ಗೆ 4.30ಕ್ಕೆ ಶ್ರೀ ಸಾಯಿ ಬಾಬಾ ಅವರಿಗೆ ಕಾಕಡ ಆರತಿ, 5.30ಕ್ಕೆ ಅಭಿಷೇಕ, 6.30ಕ್ಕೆ ವಿಶೇಷ ಅಲಂಕಾರ ಮಾಡಲಾಯಿತು. ಸಂಜೆ 6ಗಂಟೆಗೆ ಧೂಪಾರತಿ, ರಾತ್ರಿ 9ಕ್ಕೆ ಶೇಜಾರತಿ ಧಾರ್ಮಿಕ ಕಾರ್ಯಕ್ರಮ ಹಾಗೂ ವಿಶೇಷ ಅಲಂಕಾರ ಹಮ್ಮಿಕೊಳ್ಳಲಾಗಿತ್ತು. ಭಕ್ತರಿಗೆ ಅನ್ನ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿತ್ತು.

ಕತ್ತರಿಘಟ್ಟದ ಮೆಳೆಯಮ್ಮ ಆಧ್ಯಾತ್ಮಿಕ ಕೇಂದ್ರದ ಶ್ರೀ ಚಂದ್ರಶೇಖರ್ ಗುರೂಜಿ, ತಾಲೂಕಿನ ರಾಜಕೀಯ ಮುಖಂಡರು, ಗಣ್ಯರು ಸಾಯಿಬಾಬರ ದರ್ಶನ ಪಡೆದರು.