ಜಿಲ್ಲೆ

26ರಿಂದ ಅವನಿ ಶೃಂಗೇರಿ ಮಠದಲ್ಲಿ ವಿಶೇಷ ಪೂಜೆ

ಕೋಲಾರ ಡೆಸ್ಕ್

ಮುಳಬಾಗಿಲು: ಮಹಾಶಿವರಾತ್ರಿ ಪ್ರಯುಕ್ತ ತಾಲೂಕಿನ ಅವನಿ ಗ್ರಾಮದ ಶೃಂಗೇರಿ ಶಂಕರ ಮಠದ ಆರಾಧ್ಯ ದೇವರಾದ ಶ್ರೀ ಶಾರದಾ ಚಂದ್ರಮೌಳೆಶ್ವರರಿಗೆ ಫೆ.-26 ರಿಂದ 28ರ ವರೆಗೆ ನಿತ್ಯ ಬೆಳಗ್ಗೆ 4 ಆಯಾಮಗಳಲ್ಲಿ ಪೀಠಾಧ್ಯಕ್ಷ ಶ್ರೀ ಅದ್ವೆ$ೃತಾನಂದ ಭಾರತಿ ಸ್ವಾಮೀಜಿ ಅವರ ಸಾನ್ನಿಧ್ಯದಲ್ಲಿ ಫಲ ಪಂಚಾಮೃತ ಸಹಿತ ರುದ್ರಾಭಿಷೇಕ ಪೂಜೆ ಹಮ್ಮಿಕೊಳ್ಳಲಾಗಿದೆ. ಫೆ.28 ರಂದು ಶ್ರೀ ಪ್ರಸನ್ನ ಪಾರ್ವತಿ ಸಮೇತ ಶ್ರೀ ರಾಮಲಿಂಗೇಶ್ವರ ಸ್ವಾಮಿಯ ರಥೋತ್ಸವವು ಜರುಗಲಿದೆ. ಶ್ರೀಮಠದಿಂದ ಭಕ್ತರಿಗೆ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿದ್ದು, ಗುರುಗಳ ದರ್ಶನ, ಪಾದಪೂಜೆ, ಬಿಕ್ಷಾ ಕಾಣಿಕೆ, ಪೂಜಾ ಕಾಣಿಕೆ ಹಾಗೂ ವಸ್ತ್ರ ಸಮರ್ಪಣೆ ಸೇವೆ ಲಭ್ಯವಿರಲಿದೆ. ಹೆಚ್ಚಿನ ಮಾಹಿತಿಗೆ ದೂ.9900807385, 9972274009 ಸಂಪರ್ಕಿಸಬಹುದು ಎಂದು ಶ್ರೀಮಠ ತಿಳಿಸಿದೆ.