special pooja 
ಜಿಲ್ಲೆ

ಕಲಿಯುಗದ ದೈವ ಚಿರಂಜೀವಿ ಹನುಮ

ಶಿವರಾಜ.ಎಂ

ಹೊಸಕೋಟೆ: ಹನುಮಂತ ದೇವರು ಎಲ್ಲರಿಗೂ ಸಕಲ ಕಷ್ಟಗಳನ್ನು ಪರಿಹರಿಸಿ ಒಳ್ಳೆಯದು ಮಾಡುತಿದ್ದಾನೆ ಎಂದು ಗ್ರಾಪಂ ಮಾಜಿ ಅಧ್ಯಕ್ಷೆ ಗೀತಾ ತಿಳಿಸಿದರು.
ತಾಲೂಕಿನ ದೇವಲಾಪುರದ ಅಭಯ ಆಂಜನೇಯ ಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ನಂತರ ಮಾತನಾಡಿದರು.
ಗಾ.ಪಂ. ಮಾಜಿ ಸದಸ್ಯೆ ಗೀತಾ ಪ್ರಕಾಶ್ ಮಾತನಾಡಿ, ದೇವರ ಸ್ಮರಣೆ ಎಲ್ಲಿರಲ್ಲೂ ವಿಶೇಷ ಶಕ್ತಿ ತುಂಬುತ್ತದೆ. ಭಾರತೀಯ ಶಾಸ್ತ್ರಗಳಲ್ಲೂ ಹನಮಂತನ ಸ್ಮರಣೆಯಿಂದಾಗುವ ಲಾಭಗಳ ಬಗ್ಗೆ ಸಾಕಷ್ಟು ಉಲ್ಲೇಖಗಳಿವೆ. ಇಂತಹ ಮಹಾಮಹಿಮ ಭಕ್ತರ ಕರೆಗೆ ಸ್ಪಂದಿಸುವ ಚಿರಂಜೀವಿಯಾಗಿದ್ದಾನೆ ಎಂದರು.
ಮುಖಂಡ, ಪ್ರಕಾಶ್ ಮತನಾಡಿ, 18 ವರ್ಷಗಳ ಹಿಂದೆ ಗೀತಾ ಪ್ರಕಾಶ್ ಅವರ ಕುಟುಂಬದಲ್ಲಿ ಸದಸ್ಯನಂತಿದ್ದ ಮಂಗವೊಂದು ವಯೋಸಹಜ ಖಾಯಿಲೆಯಿಂದ ಗೀತಾ ಅವರ ಮಡಿಲಿನಲ್ಲೆ ಅಸುನೀಗಿತ್ತು. ಗ್ರಾಮದ ಜನತೆಗಾಗಲಿ, ಕುಟುಂಬದ ಸದಸ್ಯರಿಗಾಗಲಿ ಯಾವುದೆ ತೊಂದರೆ ನೀಡದೆ ಗ್ರಾಮದಲ್ಲಿ ತಾನೂ ಒಬ್ಬ ಸದಸ್ಯನಂತಿದ್ದ ಆ ಮಂಗನ ಸಾವಿಗೆ ಗ್ರಾಮವೇ ಕಣ್ಣೀರಿಟ್ಟಿತ್ತು. ಗ್ರಾಮದಲ್ಲೆ ಎಲ್ಲಾ ವಿಧಿ ವಿಧಾನಗಳೊಂದಿಗೆ ಅಂತ್ಯ ಸಂಸ್ಕಾರ ಮಾಡಿ ಅಲ್ಲಿಯೇ ದೇವಾಲಯ ನಿರ್ಮಿಸಲಾಯಿತು ಎಂದರು.
ಮುಖಂಡರಾದ ರಾಹುಲ್‌ಕುಮಾರ್, ಸುರೇಶ್, ಅಮೋಘ್, ಮುಖೇಶ್, ಸುನೀಲ್ ಇದ್ದರು.