ವಿಜಯವಾಣಿ ಸುದ್ದಿಜಾಲ ಧಾರವಾಡ
ಸರೋದ ವಾದಕ ಪಂ. ರಾಜೀವ ತಾರಾನಾಥ ನೆನಪಿನಲ್ಲಿ ಪಂ. ರಾಜೀವ್ ತಾರಾನಾಥ್ ಮೆಮೋರಿಯಲ್ ಟ್ರಸ್ಟ್, ಜಿ.ಬಿ.ಜೋಶಿ ಮೆಮೋರಿಯಲ್ ಟ್ರಸ್ಟ್ ಸಹಯೋಗದಲ್ಲಿ ಏ. 11ರಂದು ನಗರದ ಸೃಜನಾ ರಂಗ ಮಂದಿರದಲ್ಲಿ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿದೆ.
ಅಂದು ಸಂಜೆ 5.30ಕ್ಕೆ ಪಂ. ರಾಜೀವ ತಾರಾನಾಥರ ಬಗ್ಗೆ "ನಗುವನ' ಕ್ರಿಯೇಶನ್ಸ್ ಅಡಿ ಎಚ್.ಆರ್. ಸುಜಾತ ಹಾಗೂ ಎನ್ಆರ್ ವಿಶುಕುಮಾರ್ ನಿರ್ಮಿಸಿದ ಸಾಕ್ಷಿ ಚಿತ್ರ ಪ್ರದರ್ಶನ ನಡೆಯಲಿದೆ. ನಂತರ ತಾರಾನಾಥರ ಬಗ್ಗೆ ವಿವಿಧ ಲೇಖಕರು ಬರೆದ ಸಂಕಲನವನ್ನು ಜ್ಞಾನಪೀಠ ಪ್ರಶಸ್ತಿ ವಿಜೇತ ಡಾ. ಚಂದ್ರಶೇಖರ ಕಂಬಾರ ಬಿಡುಗಡೆ ಮಾಡುವರು. ಪುಸ್ತಕ ಕುರಿತು ಹಿರಿಯ ವಿಮರ್ಶಕ ಡಾ. ಬಸವರಾಜ್ ಕಲ್ಗುಡಿ ಮಾತನಾಡಲಿದ್ದಾರೆ. ಪಂ. ರಾಜೀವ್ ತಾರಾನಾಥರ ಸ್ನೇಹ ವ್ಯಕ್ತಿತ್ವದ ಕುರಿತು ಡಾ. ರಮಕಾಂತ್ ಜೋಶಿ ಹಾಗೂ ಗಾಯಕ ಪಂ. ಎಂ. ವೆಂಕಟೇಶ್ ಕುಮಾರ ತಮ್ಮ ನೆನಪುಗಳನ್ನು ಹಂಚಿಕೊಳ್ಳಲಿದ್ದಾರೆ. ಅನಂತರ ಪಂ. ಪ್ರವಿಣ ಗೋಡಖಿಂಡಿ ಬಾನಸುರಿ ವಾದನ ಪ್ರಸ್ತುತಪಡಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.