ರಾಜಯೋಗ ಶಿಕ್ಷಕಿ ಮೋಹನಾಕುಮಾರಿ ಅಕ್ಕ. 
ಜಿಲ್ಲೆ

ಚನ್ನರಾಯಪಟ್ಟಣದಲ್ಲಿ ವಿಶೇಷ ಕಾರ್ಯಕ್ರಮ

ಅಭಿನಯ್ ಎಚ್.ಎಂ

ಚನ್ನರಾಯಪಟ್ಟಣ: ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಸಾಮಾಜಿಕ ಆರೋಗ್ಯ ನಿರ್ವಹಣೆಯಲ್ಲಿ ಮಹಿಳೆಯರ ಪಾತ್ರ ಕುರಿತು ಮಾ. 8ರಂದು ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ರಾಜಯೋಗ ಶಿಕ್ಷಕಿ ಮೋಹನಾಕುಮಾರಿ ಅಕ್ಕ ತಿಳಿಸಿದರು.

ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬ್ರಹ್ಮ ಕುಮಾರೀಸ್ ವತಿಯಿಂದ ಕಾರ್ಯಕ್ರಮ ಆಯೋಜಿಸಲಾಗಿದೆ. ಅಂದು ಸಂಜೆ 4 ಗಂಟೆಗೆ ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಕಾರ್ಯಕ್ರಮ ಆರಂಭವಾಗಲಿದೆ. ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಹಾಸನ ಸಂಚಾಲಕರಾದ ರಾಜಯೋಗಿನಿ ಬ್ರಹ್ಮಕುಮಾರಿ ಮೀನಕ್ಕ ವಹಿಸಲಿದ್ದಾರೆ. ವಿಶೇಷ ಆಹ್ವಾನಿತರಾಗಿ ಸರಿಗಮಪ ಖ್ಯಾತಿಯ ಕುಮಾರಿ ಎಂ.ಅಮೂಲ್ಯಾ ಆಗಮಿಸಲಿದ್ದು, ಮುಖ್ಯ ಅತಿಥಿಗಳಾಗಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಕುಸುಮಾ ಬಾಲಕೃಷ್ಣ, ಭರತನಾಟ್ಯ ಕಲಾವಿದೆ ರಮ್ಯಾ ಸೂರಜ್ ಆಗಮಿಸಲಿದ್ದಾರೆ ಎಂದರು.

ಕುಮಾರಿ ಪ್ರಿಯಾ ಮತ್ತು ತಂಡದವರಿಂದ ಸುಮಧುರ ಸ್ಯಾಕ್ಸೋಫೋನ್ ವಾದನ ಏರ್ಪಡಿಸಲಾಗಿದೆ. ಅಲ್ಲದೆ ಮಹಿಳಾ ದಿನದ ಪ್ರಯುಕ್ತ ವಿಶೇಷ ಸಮಾಜಮುಖಿ ಮಹಿಳೆಯರಾದ ಚಂದ್ರಕಲಾ ಮಂಜೇಗೌಡ, ವಿಜಯಾ ಜೈಹಿಂದ್ ನಾಗಣ್ಣ, ಪ್ರೇಮಮ್ಮ, ಯಶೋದಾ ಜೈನ್, ಗಾಯತ್ರಿ ನಂಜುಂಡಮೂರ್ತಿ, ಸ್ವರ್ಣಾ ಮಂಜುನಾಥ್, ಡಾ.ಶ್ವೇತಾ, ಆಶಾ, ಸ್ವಾತಿ ಭಾರದ್ವಾಜ್, ಅನಸೂಯ ನಾಗಪ್ಪ ಅವರನ್ನು ಸನ್ಮಾನಿಸಲಾಗುವುದು ಎಂದು ತಿಳಿಸಿದರು.