ದೇವನಹಳ್ಳಿ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡಿದ್ದ ತಾಲೂಕು ಕಾರ್ಯಕರ್ತ ಪದಾಧಿಕಾರಿಗಳ ಸಭೆಯಲ್ಲಿ ಜಿಲ್ಲಾ ಪ್ರಧಾನಕಾರ್ಯದರ್ಶಿ ಎಚ್​.ಎಂ.ರವಿಕುಮಾರ್​ ಮಾತನಾಡಿದರು. ತಾಲೂಕು ಅಧ್ಯಕ್ಷ ಅಂಬರೀಶಗೌಡ, ಮಾಜಿ ಶಾಸಕ ಜಿ.ಚಂದ್ರರ್ಣ, ರಾಜ್ಯ ಪರಿಷತ್​ ಸದಸ್ಯ ದೇಸೂ ನಾಗರಾಜ್​, ಬಿಜೆಪಿ ಪದಾಧಿಕಾರಿಗಳಾದ ಓಬದೇನಹಳ್ಳಿ ಮುನಿಯಪ್ಪ, ಭಗವಾನ್​, ರಾಮು, ಬುಳ್ಳಹಳ್ಳಿ ಎಂ. ರಾಜಪ್ಪ ಇದ್ದರು. 
ಜಿಲ್ಲೆ

ಬಿಜೆಪಿಯಿಂದ ದಿನವೂ ವಿಶೇಷ ಕಾರ್ಯಕ್ರಮ

ಬೆಂಗಳೂರು ಗ್ರಾಮಾಂತರ ಡೆಸ್ಕ್

ದೇವನಹಳ್ಳಿ : ನರೇಂದ್ರ ಮೋದಿ ಅವರು ಪ್ರಧಾನಿಯಾಗಿ ಯಶಸ್ವಿ 11 ವರ್ಷ ಪೂರೈಸಿದ್ದರಿಂದ ಬಿಜೆಪಿಯಿಂದ ಪ್ರತಿದಿನ ಒಂದೊಂದು ವಿಶೇಷ ಕಾರ್ಯಕ್ರಮ ರೂಪಿಸುವಂತೆ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಆದೇಶದಂತೆ ವಿಭಿನ್ನ ಕಾರ್ಯಕ್ರಮಗಳನ್ನು ಜಿಲ್ಲೆಯಲ್ಲಿ ಆ.15ರವರೆಗೂ ರೂಪಿಸಲಾಗಿದೆ ಎಂದು ಜಿಲ್ಲಾ ಬಿಜೆಪಿ ಪ್ರಧಾನಕಾರ್ಯದರ್ಶಿ ಎಚ್​.ರವಿಕುಮಾರ್​ ತಿಳಿಸಿದರು.

ತಾಲೂಕಿನ ಪ್ರವಾಸಿ ಮಂದಿರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ತಾಲೂಕು ಕಾರ್ಯಕರ್ತರ, ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಜೂ.15 ರಿಂದ 17ರವರೆಗೂ ಶಕ್ತಿಕೇಂದ್ರಗಳಲ್ಲಿ ಸಭೆಗಳ ಆಯೋಜನೆ ಹಾಗೂ ಆಯುಷ್ಮಾನ್​ ಭಾರತ್​ ನೋಂದಣಿ ಮತ್ತು ಸಾಹಿತ್ಯ ವಿವರಣೆ ಜೂ.17 ರಿಂದ 20 ರವರೆಗೂ ಯೋಗಪ್ರಶಿಕ್ಷಣ ಹಾಗೂ ಪೂರ್ವ ತಯಾರಿ, ಜೂ.21 ರಂದು ಮಂಡಲ ಮಟ್ಟದಲ್ಲಿ ಯೋಗ ದಿನಾಚರಣೆ, ಜೂ.5 ರಿಂದ ಆ.15 ರವರೆಗೂ ವಿಶ್ವಪರಿಸರ ದಿನಾಚರಣೆ, ತಾಯಿ ಹೆಸರಿನಲ್ಲೊಂದು ಸಸಿ ಕಾರ್ಯಕ್ರಮ, ಜೂ.23 ರಂದು ಶ್ಯಾಂ ಪ್ರಕಾಶ್​ ಮುಖರ್ಜಿ ಬಲಿದಾನ್​ ದಿವಸ್​, ಜೂ.25 ರಂದು ತುರ್ತು ಪರಿಸ್ಥಿತಿಯಲ್ಲಿ ಜೈಲಿಗೆ ಹೋಗಿ ಬಂದ ಹಿರಿಯರ ಭೇಟಿ, ಗೌರವ ಸಮರ್ಪಣೆ ಮತ್ತು ತುರ್ತು ಪರಿಸ್ಥಿತಿ ಕುರಿತು ಜಿಲ್ಲಾ ಮಟ್ಟದ ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿದೆ ಎಂದರು.

ಮಾಜಿ ಶಾಸಕ ಜಿ.ಚಂದ್ರಣ್ಣ ಮಾತನಾಡಿ, ಮೋದಿ ಅವರ 11 ವರ್ಷದ ಸಾಧನೆಯನ್ನು ಸಂಭ್ರಮದಿಂದ ಆಚರಿಸುತ್ತಾ ಕಾರ್ಯಕ್ರಮಗಳನ್ನು ರೂಪಿಸಿ ಪಕ್ಷ ಸಂಟಿಸಲಾಗುತ್ತಿದೆ ಎಂದರು. ಬಿಜೆಪಿ ತಾಲೂಕು ಅಧ್ಯಕ್ಷ ಅಂಬರೀಶಗೌಡ ಮಾತನಾಡಿ, ಬಡವರಿಗಾಗಿ ಅತೀ ಕಡಿಮೆ ದರದಲ್ಲಿ ಔಷಧಗಳು ಲಭ್ಯವಾಗುತ್ತಿದ್ದ ಜನೌಷಧ ಮಳಿಗೆಗಳನ್ನು ರಾಜ್ಯ ಸರ್ಕಾರ ಮೆಡಿಕಲ್​ ಮಾಫಿಯಾ ಜತೆ ಶಾಮೀಲಾಗಿ ಮುಚ್ಚಿಸಲು ಹೊರಟಿಸುವುದು ಖಂಡನೀಯ. ಗ್ಯಾರಂಟಿಗಳಿಗಾಗಿ ಜನಸಾಮಾನ್ಯರ ಜೇಬಿನಿಂದಲೇ ಹಣ ಕಸಿಯುತ್ತಿರುವ ಕಾಂಗ್ರೆಸ್​ ಸರ್ಕಾರಕ್ಕೆ ಮುಂದಿನ ಚುನಾವಣೆಗಳಲ್ಲಿ ಜನರೇ ತಕ್ಕ ಉತ್ತರ ಕೊಡಲಿದ್ದಾರೆ ಎಂದರು.

ಕುಂದಾಣ ಹೋಬಳಿ ಯುವಮೋರ್ಚಾ ಅಧ್ಯಕ್ಷ ಅರುವನಹಳ್ಳಿ ವೆಂಕಟೆಗೌಡ, ಜಿಲ್ಲಾ ಮಹಿಳಾ ಕಾರ್ಯದರ್ಶಿ ನಾಗವೇಣಿ, ತಾಲೂಕು ಮಹಿಳಾಮೋರ್ಚಾ ಅಧ್ಯೆ ವಿಜಯಾ, ಉಪಾಧ್ಯಕ್ಷ ಆರ್​.ಪುನೀತಾ, ಮಂಜುನಾಥ, ನಾರಾಯಣಸ್ವಾಮಿ ಇದ್ದರು.