ಜಿಲ್ಲೆ

ಮಳೆಗಾಗಿ ದರ್ಗಾದಲ್ಲಿ ವಿಶೇಷ ಪ್ರಾರ್ಥನೆ

ಹಿರೇಕೆರೂರ: ಪಟ್ಟಣದ ಹಜರತ್ ಸೈಯದ್ ಅಬ್ದುಲ್ ವಹಾಬ್ ಖಾದ್ರಿ ದರ್ಗಾದಲ್ಲಿ ಮುಸ್ಲಿಮರು ಮಳೆಗಾಗಿ ಶುಕ್ರವಾರ ಸಾಮೂಹಿಕವಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.


ಮಳೆ ಬಾರದ ಕಾರಣ ರೈತರು ಸಂಕಷ್ಟದಲ್ಲಿ ಇದ್ದಾರೆ. ಬಿತ್ತಿದ ಬೆಳೆ ಒಣಗುತ್ತಿದೆ. ಹೀಗಾಗಿ ಸಮರ್ಪಕ ಮಳೆ ಸುರಿದು ರೈತರ ಬದುಕು ಹಸನಾಗಲಿ ಎಂದು ವಿಶೇಷ ಪ್ರಾರ್ಥನೆ ಸಲ್ಲಿಸಿದರು.


ಪ.ಪಂ. ಸದಸ್ಯ ಸನಾವುಲ್ಲಾ ಮಕಾಂದಾರ್, ಮುಜೀಬ್ ಮಾಸೂರ, ಶಫೀಸಾಬ ಚಿಕ್ಕೇರೂರ, ಇಂತಿಯಾಜ್ ಅಪರಂಜಿ, ಖದಿರ್ ಹೊಸಳ್ಳಿ, ಶಾಹಿದ್ ಸಾಹಬ್ ತಾವರಗಿ, ಅಜೀಜ್ ಮುಗಳಗೇರಿ, ಸಾಧಿಕ್ ಮಾಸೂರು, ಸಮಿವುಲ್ಲಾ ವಡ್ಡಿನಕಟ್ಟಿ ಮತ್ತು ಮುಸ್ಲಿಮರು ಇದ್ದರು.