ಜಿಲ್ಲೆ

ಖಾದರ್ ಹುಟ್ಟುಹಬ್ಬಕ್ಕೆ ವಿಶೇಷ ಪ್ರಾರ್ಥನೆ : ಸರ್ವ ಧರ್ಮಿಯರ ಧಾರ್ಮಿಕ ಕ್ಷೇತ್ರಗಳಲ್ಲಿ ಆರೋಗ್ಯ, ಆಯುಷ್ಯಕ್ಕೆ ಹಾರೈಕೆ

ಸೌಮ್ಯ ಆರ್

ವಿಜಯವಾಣಿ ಸುದ್ದಿಜಾಲ ಉಳ್ಳಾಲ

ಉಳ್ಳಾಲ ಮತ್ತು ಮುಡಿಪು ಬ್ಲಾಕ್ ಕಾಂಗ್ರೆಸ್, ಯುವಕಾಂಗ್ರೆಸ್ ಮತ್ತು ಎನ್‌ಎಸ್‌ಯುಐ ಸಂಯುಕ್ತ ಆಶ್ರಯದಲ್ಲಿ ಸ್ಪೀಕರ್ ಯು.ಟಿ.ಖಾದರ್ ಅವರ ಹುಟ್ಟುಹಬ್ಬದ ಪ್ರಯುಕ್ತ ವಿವಿಧ ಧಾರ್ಮಿಕ ಕ್ಷೇತ್ರಗಳಲ್ಲಿ ವಿಶೇಷ ಪ್ರಾರ್ಥನೆ ನಡೆಯಿತು.

ಸೋಮೇಶ್ವರ ಶ್ರೀ ಸೋಮನಾಥ ದೇವಸ್ಥಾನ, ಉಳ್ಳಾಲ ಸಯ್ಯದ್ ಮದನಿ ದರ್ಗಾ, ಪೆರ್ಮನ್ನೂರು ಸಂತ ಸೆಬಾಸ್ಟಿಯನ್ ಚರ್ಚ್‌ನಲ್ಲಿ ಖಾದರ್ ಅವರು ಆರೋಗ್ಯ, ಆಯುಷ್ಯ, ರಾಜಕೀಯದಲ್ಲಿ ಇನ್ನಷ್ಟು ಬೆಳವಣಿಗೆಗಾಗಿ ಮುಖಂಡರು, ಕಾರ್ಯಕರ್ತರು ಪ್ರಾರ್ಥನೆ ಸಲ್ಲಿಸಿದರು.

ಮೂಡ ಅಧ್ಯಕ್ಷ ಸದಾಶಿವ ಉಳ್ಳಾಲ್, ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಶೆಟ್ಟಿ ಬೋಳಿಯಾರ್ ಮಾತನಾಡಿದರು. ಧಾರ್ಮಿಕ ಪರಿಷತ್ ಜಿಲ್ಲಾ ಸದಸ್ಯ ಸುರೇಶ್ ಭಟ್ನಗರ, ಮಂಗಳೂರು ತಾಪಂ ಮಾಜಿ ಅಧ್ಯಕ್ಷ ಮೊಹಮ್ಮದ್ ಮೋನು ಮಲಾರ್, ಉಳ್ಳಾಲ ದರ್ಗಾ ಅಧ್ಯಕ್ಷ ಬಿ.ಜಿ.ಹನೀಫ್, ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಕಿಸಾನ್ ಘಟಕ ಅಧ್ಯಕ್ಷ ಪುರುಷೋತ್ತಮ್ ಶೆಟ್ಟಿ ಪಿಲಾರ್, ಸೋಮೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಸದಸ್ಯ ದೀಪಕ್ ಪಿಲಾರ್, ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಮನ್ಸೂರ್ ಮಂಚಿಲ, ಮಹಿಳಾ ಘಟಕ ಅಧ್ಯಕ್ಷೆ ಚಂದ್ರಿಕಾ ರೈ, ಯುಟಿಎಸ್ ಸೋಶಿಯಲ್ ಕ್ಲಬ್ ಅಧ್ಯಕ್ಷ ನಝೀರ್ ಬಾರ್ಲಿ, ಮುಖಂಡರಾದ ಅಮಿತಾ ಆಶ್ವಿನ್, ಶಾಲಿನಿ ಶೆಟ್ಟಿ, ಉಸ್ಮಾನ್ ಕಲ್ಲಾಪು, ಮೌರೀಸ್ ಮೊಂತೆರೋ, ರೇವತಿ ಕುಂಪಲ, ಲತಾ ತಲಪಾಡಿ, ಧನು ಕೊಲ್ಯ, ಮುಸ್ತಫ ಅಬ್ದುಲ್ಲ, ಸಾಜಿದ್ ಕುಂಪಲ, ನೋವಿತ ಗಟ್ಟಿ, ರಾಜು ಬಂಡಸಾಲೆ, ಝಿಯಾದ್ ಮುಕ್ಕಚ್ಚೇರಿ, ಪ್ರಕಾಶ್ ಪಿಂಟೋ, ಅಶ್ರಫ್ ಉಳ್ಳಾಲ, ಪ್ರೇಮ್ ಕೊಲ್ಯ, ದಿಲೀಪ್ ರೇಗೋ, ರಿಚರ್ಡ್, ರಾಮಚಾರಿ, ರವಿರಾಜ್ ಶೆಟ್ಟಿ ದೇರಳಕಟ್ಟೆ, ನಾಗೇಶ್ ತೊಕ್ಕೊಟ್ಟು, ಜಸಿಂತಾ ಕುತ್ತಾರ್, ಮೊಯಿದಿನ್ ಮೊದಲಾದವರು ಉಪಸ್ಥಿತರಿದ್ದರು.