ಜಿಲ್ಲೆ

ಹೊಸತೋಟ ಮಸೀದಿಯಲ್ಲಿ ವಿಶೇಷ ಪ್ರಾರ್ಥನೆ

ಪ್ರಸಿನ್ ಕೆ.ಆರ್

ಸೋಮವಾರಪೇಟೆ: ಪೆಹಲ್ಗಾಮ್ ದಾಳಿ ನಡೆಸಿದ ಭಯೋತ್ಪಾಕರಿಗೆ ಸಹಕಾರ ನೀಡುತ್ತಿರುವ ಪಾಕಿಸ್ತಾನದ ವಿರುದ್ಧ ಆಪರೇಷನ್ ಸಿಂಧೂರ ಕಾರ್ಯಾಚರಣೆ ನಡೆಸುತ್ತ ದೇಶ ರಕ್ಷಣೆಯಲ್ಲಿ ತೊಡಗಿರುವ ಭಾರತೀಯ ಸೈನಿಕರ ಶ್ರೇಯಸ್ಸಿಗಾಗಿ ಹೊಸತೋಟ ಮಸೀದಿಯಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.

ಈ ಸಂದರ್ಭ ಮಾತನಾಡಿದ ಖತೀಬ್ ಹಾಫಿಜ್ ಉಸ್ಮಾನ್ ಸಖಾಫಿ ರವರು, ಸಾಮಾಜಿಕ ಜಾಲತಾಣಗಳನ್ನು ಎಲ್ಲರೂ ಎಚ್ಚರಿಕೆಯಿಂದ ಬಳಕೆ ಮಾಡಬೇಕು. ನಮ್ಮ ಕೇಂದ್ರ ಸರ್ಕಾರದೊಂದಿಗೆ ಮತ್ತು ಸೈನಿಕರೊಂದಿಗೆ ಎಲ್ಲರೂ ಕೈಜೋಡಿಸಬೇಕು. ನಾವುಗಳು ಈ ಮಣ್ಣಿನಿಂದ ಸೃಷ್ಟಿ ಪಡೆದವರು, ನಮ್ಮ ದೇಶ ನಮ್ಮ ಹೆಮ್ಮೆ ಎಂದು ಕರೆ ನೀಡಿದರು.

ಮಸೀದಿಯ ಖತೀಬರಾದ ಹಾಫಿಜ್ ಉಸ್ಮಾನ್ ಸಖಾಫಿ ಪ್ರಾರ್ಥನೆ ನೆರವೇರಿಸಿದರು. ಈ ಸಂದರ್ಭ ಜಮಾಅತ್ ಕಾರ್ಯದರ್ಶಿ ಸಲೀಂ ಹೊಸತೋಟ, ಸಮಿತಿಯ ಸದಸ್ಯರುಗಳಾದ ಖಾಲೀದ್, ರಷೀದ್, ಇಬ್ರಾಹಿಂ, ಶಿಹಾಬ್, ಜಾವಿದ್ ಇದ್ದರು.