ಜಿಲ್ಲೆ

ಏಣಿತ್ತಡ್ಕ ಶಿರಾಡಿ ದೇವಸ್ಥಾನದಲ್ಲಿ ವಿಶೇಷ ಪ್ರಾರ್ಥನೆ

ಕಡಬ: ಬಿಜೆಪಿ ಸುಳ್ಯ ಮಂಡಲ ಎಸ್.ಟಿ. ಮೋರ್ಚಾ ವತಿಯಿಂದ ಪ್ರಧಾನಿ ನರೇಂದ್ರ ಮೋದಿ ಅವರ 74ನೇ ಜನ್ಮದಿನಾಚರಣೆ, ಬಿಜೆಪಿ ಸದಸ್ಯತ್ವ ಅಭಿಯಾನ ಕಾರ್ಯಕ್ರಮ ಕೊಲ ಗ್ರಾಮದ ಏಣಿತಡ್ಕ ಎಂಬಲ್ಲಿ ನಡೆಸಲಾಯಿತು.

ಪ್ರಧಾನಿ ಮೋದಿಜಿ ಅವರ ಆಡಳಿತ ಹುದ್ದೆಗೆ ಶಕ್ತಿತುಂಬಲು ಏಣಿತ್ತಡ್ಕ ಶಿರಾಡಿ ದೇವಸ್ಥಾನದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಬಳಿಕ ಬಿಜೆಪಿ ಸದಸ್ಯತ್ವ ಅಭಿಯಾನದ ಅಂಗವಾಗಿ ಮಾಹಿತಿ ಕಾರ್ಯಾಗಾರ ಹಮ್ಮಿಕೊಂಡು ಇದರ ಮಾಹಿತಿಯನ್ನು ನೀಡಲಾಯಿತು.

ಎಸ್.ಟಿ. ಮೋರ್ಚಾದ ಅಧ್ಯಕ್ಷ ಗಂಗಾಧರ ಪೆರಿಯಡ್ಕ, ಪ್ರಧಾನ ಕಾರ್ಯದರ್ಶಿ ಬಾಲಕೃಷ್ಣ ಏನೇಕಲ್ಲು, ಬಾಲಕೃಷ್ಣ ಅಲಂಗಪ್ಪೆ, ಬೂತ್ ಕಾರ್ಯದರ್ಶಿ ನಿರಂಜನ್ ಏಣಿತ್ತಡ್ಕ, ಲ್ಯಾಂಪ್ ಸೊಸೈಟಿ ನಿರ್ದೇಶಕ ನೇತ್ರಾಕ್ಷ್ಷ, ಕೊಲ ಗ್ರಾಪಂ ಮಾಜಿ ಸದಸ್ಯ ಸುಂದರ ನಾಯ್ಕ, ಪ್ರಮುಖರಾದ ಯೋಗೇಂದ್ರ ನಾಯ್ಕ, ಬಾಲಕೃಷ್ಣ ನಾಯ್ಕ ಕೊರಂತಾಜೆ ಮೊದಲಾದವರು ಇದ್ದರು.