ಆಸ್ಟ್ರೇಲಿಯಾದಲ್ಲಿರುವ ಪುತ್ತಿಗೆ ಮಠದಲ್ಲಿ ಅನಿವಾಸಿ ಭಾರತೀಯರು ಭಾರತದ ಚುನಾವಣಾ ಫಲಿತಾಂಶದ ಹಿನ್ನೆಲೆಯಲ್ಲಿ ಶ್ರೀಕೃಷ್ಣನಿಗೆ ವಿಶೇಷ ಪೂಜಾ ಸೇವೆ ಸಲ್ಲಿಸಲು ಆಗಮಿಸುವಂತೆ ಹೊರಡಿಸಿದ ಆಮಂತ್ರಣ ಪತ್ರಿಕೆ. 
ಜಿಲ್ಲೆ

ಭಾರತಕ್ಕೆ ಸಿಗಲಿ ಸೂಕ್ತ, ಸಮರ್ಥ ನಾಯಕ

ಆಸ್ಟ್ರೇಲಿಯಾ, ಅಮೆರಿಕದ ಪುತ್ತಿಗೆ ಮಠದಲ್ಲಿ ಅನಿವಾಸಿ ಭಾರತೀಯರ ಪ್ರಾರ್ಥನೆ

  • ವಿಶೇಷ ಅಭಿಷೇಕ, ಪಾರಾಯಣ

ವಿಜಯವಾಣಿ ಸುದ್ದಿಜಾಲ ಉಡುಪಿ
ಲೋಕಸಭಾ ಚುನಾವಣೆಯ ಫಲಿತಾಂಶದ ಕುತೂಹಲ ಕೇವಲ ಭಾರತಕ್ಕಷ್ಟೇ ಅಲ್ಲ, ವಿದೇಶಗಳಿಗೂ ವ್ಯಾಪಿಸಿದೆ. ಆಸ್ಟ್ರೆಲಿಯಾದಲ್ಲಿರುವ ಅನಿವಾಸಿ ಭಾರತೀಯರಿಗೂ ಸಹ ಫಲಿತಾಂಶದ ಕುತೂಹಲವಿದ್ದು, ಭಾರತ ಸಂಭ್ರಮಿಸುವ ಮೊದಲೇ ಕಾಲಮಾನದಲ್ಲಿ ಮುಂದಿರುವ ಈ ದೇಶದಲ್ಲಿ ಭಾರತದ ಒಳಿತಿಗಾಗಿ ವಿಶೇಷ ಪ್ರಾರ್ಥನೆ ಮಾಡಿದ್ದಾರೆ.

ಆಸ್ಟ್ರೇಲಿಯಾದ ಪುತ್ತಿಗೆ ಮಠದಲ್ಲಿ ಬೆಳಗ್ಗೆ ಶ್ರೀಕೃಷ್ಣ ದೇವರಿಗೆ ವಿಶೇಷ ಪಂಚಾಮೃತ ಅಭಿಷೇಕ, ವಿಷ್ಣು ಸಹಸ್ರನಾಮ ಪಾರಾಯಣ, ಬ್ರಾಹ್ಮಣ್ಯ ತೀರ್ಥ ಆರಾಧನೆ ಮಾಡಲಾಗಿದೆ. ಸಂಜೆ 7 ಗಂಟೆಗೆ ಮತ್ತೊಮ್ಮೆವಿಷ್ಣು ಸಹಸ್ರನಾಮ ಪಾರಾಯಣ, ಬ್ರಾಹ್ಮಣ್ಯ ತೀರ್ಥ ಆರಾಧನೆ, ರಥೋತ್ಸವದ ಮೂಲಕ ವಿಶೇಷ ಪ್ರಾರ್ಥನೆ ಮಾಡಿದ್ದಾರೆ. ಅಮೆರಿಕದ ಪುತ್ತಿಗೆ ಮಠದಲ್ಲೂ ಸಹ ವಿಶೇಷ ಪ್ರಾರ್ಥನೆ ಮಾಡಲಾಗಿದೆ ಎಂದು ಉಡುಪಿ ಪುತ್ತಿಗೆ ಮಠದ ಕಾರ್ಯದರ್ಶಿ ಪ್ರಸನ್ನ ಆಚಾರ್ಯ ಮಾಹಿತಿ ನೀಡಿದ್ದಾರೆ.

ಜನ್ಮಭೂಮಿ, ದೇಶದ ಏಳಿಗೆಯಾಗಲಿ

ಪ್ರಪಂಚದ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತವು ತನ್ನ ಪ್ರಜಾಸತ್ತಾತ್ಮಕ ಪ್ರಕ್ರಿಯೆಯ ಪರಾಕಾಷ್ಠೆಯನ್ನು ಚುನಾವಣಾ ಫಲಿತಾಂಶಗಳೊಂದಿಗೆ ಆಚರಿಸುತ್ತಿದೆ. ಇಂತಹ ಸಂದರ್ಭದಲ್ಲಿ ವಿದೇಶದಲ್ಲಿದ್ದರೂ ನಾವೆಲ್ಲರೂ ನಮ್ಮ ಜನ್ಮಭೂಮಿ, ಭಾರತದ ಏಳಿಗೆಗಾಗಿ ಪ್ರಾರ್ಥಿಸಲು ಕೈಜೋಡಿಸೋಣ. ರಾಷ್ಟ್ರಕ್ಕೆ ಅರ್ಹ ನಾಯಕನನ್ನು ಶ್ರೀಕೃಷ್ಣ ಆಶೀರ್ವದಿಸಲಿ ಎಂದು ಪ್ರಾರ್ಥಿಸಿದ್ದಾರೆ.