ಜಿಲ್ಲೆ

ಆಂಜನೇಯ ಸ್ವಾಮಿಗೆ ವಿಶೇಷ ಪೂಜೆ

Davangere - Desk - Ganesh M K

ಬಸವಾಪಟ್ಟಣ: ಶ್ರಾವಣ ಮಾಸದ ಕಡೆಯ ಶನಿವಾರ ಪ್ರಯುಕ್ತ ವಿವಿಧ ದೇವಸ್ಥಾನಗಳಲ್ಲಿ ಶ್ರೀ ಆಂಜನೇಯ ಸ್ವಾಮಿಗೆ ವಿಶೇಷ ಪೂಜಾ ಕೈಂಕರ್ಯಗಳು ನಡೆದವು.

ಚಿರಡೋಣಿ, ಮಲೇ ಕುಂಬಳೂರು, ಸಾಗರಪೇಟೆ ಆಂಜನೇಯ ಸ್ವಾಮಿ ಹಾಗೂ ಶ್ರೀ ಶನೇಶ್ವರ ಸ್ವಾಮಿ, ದಾಗಿನಕಟ್ಟೆ ಶ್ರೀ ರಂಗನಾಥ ಸ್ವಾಮಿಗೆ ವಿಶೇಷ ಪೂಜೆ ನೆರವೇರಿಸಲಾಯಿತು.

ದೇವರಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಅಪಾರ ಸಂಖ್ಯೆಯಲ್ಲಿ ಭಕ್ತರು ದೇವಾಲಯಗಳಿಗೆ ಬಂದು ಭಕ್ತಿ ಸಮರ್ಪಿಸಿ, ಕೃತಾರ್ಥರಾದರು. ದಾಗಿನಕಟ್ಟೆ ರಂಗನಾಥ ದೇವಾಲಯ ಹಾಗೂ ಸಾಗರಪೇಟೆ ಆಂಜನೇಯ ಸ್ವ್ವಾಮಿ ದೇವಾಲಯದಲ್ಲಿ ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.