ಜಿಲ್ಲೆ

ಬಲಮುರಿ ಗಣಪತಿಗೆ ವಿಶೇಷ ಪೂಜೆ

ಸೋಮನಾಥ ರೆಡ್ಡಿ

ಗಜೇಂದ್ರಗಡ: ಪಟ್ಟಣದ ಬಲಮುರಿ ಗಣಪತಿ ದೇವಸ್ಥಾನ ಟ್ರಸ್ಟ್ ಕಮಿಟಿ ವತಿಯಿಂದ ಇಲ್ಲಿನ ಭಜರಂಗ ವೃತ್ತದ ಬಳಿ ಬಲಮುರಿ ಗಣಪತಿ ಮೂರ್ತಿ ಪ್ರತಿಷ್ಠಾಪನೆಯ 10ನೇ ವಾರ್ಷಿಕೋತ್ಸವ ಪ್ರಯುಕ್ತ ಗಣಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.

ಕಮಿಟಿ ಅಧ್ಯಕ್ಷ ಸುಭಾಸ ರಾಯಬಾಗಿ ಮಾತನಾಡಿ, ಸಕಲ ವಿಘ್ನಗಳ ವಿನಾಶಕನಾದ ಬಲಮುರಿ ಗಣಪತಿ ಮೂರ್ತಿಯು ಪಟ್ಟಣದಲ್ಲಿ ಪ್ರತಿಷ್ಠಾಪನೆಗೊಂಡಿರುವುದು ಸದ್ಭಕ್ತರಿಗೆ ಸಂತಸದ ವಿಷಯವಾಗಿದೆ ಎಂದರು.

ಅರ್ಚಕ ಸತ್ಯನಾರಾಯಣಭಟ್ಟ ಗಣೇಶನಿಗೆ ವಿಶೇಷ ಪೂಜೆ ನೆರವೇರಿಸಿದರು. ಸದ್ಭಕ್ತರಿಗೆ ಅನ್ನಸಂತರ್ಪಣೆ ನಡೆಯಿತು. ಕಮಿಟಿ ವತಿಯಿಂದ ಸೇವಾಕರ್ತರನ್ನು ಸನ್ಮಾನಿಸಲಾಯಿತು. ಪ್ರಭಾಕರ ಘಾಟಗೆ ಮಾತನಾಡಿದರು.

ಕೃಷ್ಣಾ ಅಂಬೋರೆ, ಪರಶುರಾಮ ಕಮ್ಮಾರ, ರವಿ ಚಿತ್ರಗಾರ, ನಂದು ಕಮ್ಮಾರ, ಸೀನು ಕಾಮಾರ, ಸಿದ್ಧಾರ್ಥ ಬಡಿಗೇರ, ಬಾಬು ಹೆಬ್ಬಾಳಕರ, ವಿಷ್ಣು ಅಂಬೋರೆ, ಬ್ರಹ್ಮಾನಂದ ಕಮ್ಮಾರ, ನಂದೀಶ ಸಂಚಾಲಿ, ಶಿವು ಚಂಗಳಿ, ಗಣೇಶ ಭೀಮರಥಿ, ರಾಜು ನಾಯಕ, ಪ್ರಶಾಂತ ಕಮ್ಮಾರ, ಮಲ್ಲಪ್ಪ ಕುಂಕಮಗಾರ, ಅನುರಾಗ ಚಿನಿವಾಲರ, ಶ್ರೀನಿವಾಸ ಕಮ್ಮಾರ, ಮೌನೇಶ ಚೌದರಿ, ರಾಘು ಕಮ್ಮಾರ, ರಾಜು ಹೆಬ್ಬಾಳಕರ, ಕಾಳಪ್ಪ ಕಮ್ಮಾರ ಇತರರು ಇದ್ದರು.