ತೀರ್ಥಹಳ್ಳಿ: ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಗೆಲುವಿಗಾಗಿ ಪ್ರಾರ್ಥಿಸಿ ಪಟ್ಟಣದ ಶ್ರೀ ರಾಮೇಶ್ವರ ದೇವಸ್ಥಾನ ಮತ್ತು ತಾಲೂಕಿನ ಗಬಡಿಯ ವಿಠಲ ದೇವಸ್ಥಾನದಲ್ಲಿ ಬಿಜೆಪಿ ಕಾರ್ಯಕರ್ತರು ವಿಶೇಷ ಪೂಜೆ ಸಲ್ಲಿಸಿದರು.
ಬಿ.ವೈ.ರಾಘವೇಂದ್ರ ನಾಮಪತ್ರ ಸಲ್ಲಿಕೆ ವೇಳೆಯಲ್ಲೂ ಶ್ರೀ ರಾಮೇಶ್ವರ ದೇವಸ್ಥಾನದ ಆವರಣಲ್ಲಿರುವ ಪ್ರಸಾದ ಕೊಡುವ ದೇವರೆಂದೇ ಪ್ರಸಿದ್ದಿಯಾಗಿರುವ ಕಂಬದ ಗಣಪತಿ ದೇವರಿಗೆ ಪೂಜೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ದೇವರ ಬಲಭಾಗದಿಂದ ಪ್ರಸಾದ ಬಿದ್ದಿದ್ದು ಶುಭ ಶಕುನವಾಗಿದೆ ಎಂದು ಪಕ್ಷದ ಕಾರ್ಯಕರ್ತರು ಸಾಮಾಜಿಕ ಜಾಲತಾಣದ ಮೂಲಕ ಸಂಭ್ರಮಿಸಿದರು.
ಪಪಂ ಸದಸ್ಯೆ ಜ್ಯೋತಿ ಮೋಹನ್, ಮಾಜಿ ಸದಸ್ಯ ವೆಂಕಟೇಶ ಪಟವರ್ಧನ್, ನೀಲೇಶ್ ಜವಳಿ, ನಟರಾಜ ಶೇಟ್ ಇತರರಿದ್ದರು.