ಭರಮಸಾಗರ: ಇಲ್ಲಿನ ದೊಡ್ಡಪೇಟೆ ರಾಘವೇಂದ್ರ ಕೃಪಾಶ್ರಮದಲ್ಲಿ ಆ.31 ರಿಂದ ಸೆ.2ರವರೆಗೆ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ 352ನೇ ಆರಾಧನಾ ಮಹೋತ್ಸವ ನಡೆಯಲಿದೆ.
ಬುಧವಾರ ಸಂಜೆ ಗೋಪೂಜೆ ಸಹಿತ ಭಜನೆ, ಅಷ್ಟಾವಧನಸೇವೆ, ಗುರುವಾರ ಪೂರ್ವಾರಾಧನೆ, ಕಳಸ ಸ್ಥಾಪನೆ, ರಾಯರ ಬೃಂದಾವನಕ್ಕೆ ಪಂಚಾಮೃತ ಅಭಿಷೇಕ, ಅಲಂಕಾರ, ಸಂಜೆ ಮಂಗಳಾರತಿ, ಶುಕ್ರವಾರ ಮಧ್ಯಾರಾಧನೆ,
ಸುಪ್ರಭಾತ, ಅಷ್ಟೋತ್ತರ ಸೇವೆ, ಪಂಚಾಮೃತ ಅಭಿಷೇಕ, ನೂತನ ವಸ್ತ್ರ ಸಮರ್ಪಣೆ, ಧಾರಣೆ, ಗುರುಭಿಕ್ಷಾ, ಪಾದಪೂಜೆ, ಅಲಂಕಾರ ಮಹಾಮಂಗಳಾರತಿ ಹಾಗೂ ಸಂಜೆ ಭಜನೆ,
ಶನಿವಾರ ಉತ್ತರಾರಾಧನೆ ಪಂಚಾಮೃತ ಅಭಿಷೇಕ, ಭೂತಕಂಬ ಪೂಜೆ, ಅಲಂಕಾರ, ಸತ್ಯನಾರಾಯಣ ಪೂಜೆ, ಸುಮಂಗಲೀ ಪೂಜೆ, ಮಂಗಳಾರತಿ ಫಲ ಮಂತ್ರಾಕ್ಷತೆ ಪ್ರಸಾದ ವಿನಿಯೋಗ ನಡೆಯಲಿದೆ.
ಮೂರು ದಿನಗಳು ನಡೆಯುವ ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಭಕ್ತರು ಪಾಲ್ಗೊಳ್ಳುವಂತೆ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.