ಜಿಲ್ಲೆ

ಮಿತ್ತಮಜಲು ದೇವಳ ವಿಶೇಷ ಸಭೆ

ಸೌಮ್ಯ ಆರ್

ಬಂಟ್ವಾಳ: ಸಜೀಪ ಮಾಗಣೆಯ ಮಿತ್ತಮಜಲು ಕ್ಷೇತ್ರದ ನೂತನ ಸುತ್ತು ಗೋಪುರ ನಿರ್ಮಾಣದ ಅಂಗವಾಗಿ ವಿಶೇಷ ಸಭೆ ಬುಧವಾರ ನಡೆಯಿತು. ಒಂದುವರೆ ಕೋಟಿ ರೂ.ವೆಚ್ಚದಲ್ಲಿ ನೂತನ ಸುತ್ತು ಗೋಪುರಗಳ ಪುನಃನಿರ್ಮಾಣದ ಬಗ್ಗೆ ಚರ್ಚಿಸಲಾಯಿತು. ಸಜಿಪ ಮಾಗಣೆ ತಂತ್ರಿ ಎಂ.ಸುಬ್ರಹ್ಮಣ್ಯ ಭಟ್ ಸಾಮೂಹಿಕ ಪ್ರಾರ್ಥನೆ ನಡೆಸಿದರು. ಊರ ಪರವೂರ ಭಕ್ತರ ಪೂರ್ಣ ಸಹಕಾರದೊಂದಿಗೆ ಮುಂದಿನ ವಿಷು ಜಾತ್ರೆಗೆ ಮುಂಚಿತವಾಗಿ ಕಾಮಗಾರಿ ಪೂರ್ಣಗೊಳ್ಳುವಂತೆ ಹಾಗೂ ಈ ಪುಣ್ಯಕಾರ್ಯಕ್ಕೆ ಎಲ್ಲರೂ ಸಹಕರಿಸುವಂತೆ ಭಕ್ತರಲ್ಲಿ ಕೇಳಿಕೊಳ್ಳಲಾಯಿತು. ಪಾಲೆಮಂಟಪ ಸಂಸಾರ ಗಡಿ ಪ್ರಧಾನರಾದ ಕಾಂತಡಿ ಗುತ್ತು ಗಣೇಶ ನಾಯಕ್ ಯಾನೆ ಉಗ್ಗಶೆಟ್ಟಿ, ಮಾಡಾದಾರು ಗುತ್ತು ಶಶಿಧರ ರೈ ಯಾನೆ ನಾರಾಯಣ ಆಳ್ವ, ಶಿವರಾಮ ಭಂಡಾರಿ ಮುತ್ತಣ್ಣ ಶೆಟ್ಟಿ, ನಗ್ರಿಗುತ್ತು ವಿವೇಕ್ ಶೆಟ್ಟಿ, ದೇವಿ ಪ್ರಸಾದ್ ಶೆಟ್ಟಿ, ಶ್ರೀಕಾಂತ್ ಶೆಟ್ಟಿ, ಜಯರಾಮ ಶೆಟ್ಟಿ, ಜೀವನ್ ಆಳ್ವ, ಹರೀಶ್ ರೈ, ಗಣೇಶ ಶೆಟ್ಟಿ, ಶ್ರೀನಾಥ್ ಶೆಟ್ಟಿ ಮೊದಲಾದ ಗುತ್ತು ಬಾಳಿಕೆ ಮನೆತನದವರು ಚಾಕರಿ ವರ್ಗದವರು ಉಪಸ್ಥಿತರಿದ್ದರು.