RAICHUR 
ಜಿಲ್ಲೆ

ಎರಡು ವೃತ್ತಗಳನ್ನು ವಿನೂತನ ರೀತಿಯಲ್ಲಿ ನಿರ್ಮಿಸಲು ಯೋಜನೆ ಡಿಸಿ ನಿತೀಶ್ ಕೆ., ಅಧ್ಯಕ್ಷತೆಯಲ್ಲಿ ವಿಶೇಷ ಸಭೆ

ರಾಯಚೂರು ನಗರದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಡಾ.ಬಾಬು ಜಗಜೀವನರಾಮ್ ಅವರ ವೃತ್ತಗಳ ಅಭಿವೃದ್ಧಿ ಹಾಗೂ ಉನ್ನತೀಕಣ ಕಾಮಗಾರಿಗಳ ಕುರಿತು ಚರ್ಚಿಸುವ ಮಹತ್ವದ ಪೂರ್ವಭಾವಿ ಸಭೆಯು ಜಿಲ್ಲಾಧಿಕಾರಿ ನಿತೀಶ್ ಕೆ., ಅಧ್ಯಕ್ಷತೆಯಲ್ಲಿ ಶನಿವಾರ ಸಂಜೆ ನಡೆಯಿತು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಮೊದಲಿಗೆ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದ ಅಭಿವೃದ್ಧಿಯ ಪ್ರಾತ್ಯಕ್ಷಿಕೆಯ 3ಡಿ ಡಿಜೈನ್ ತೋರಿಸಲಾಯಿತು. ಈ ವೃತ್ತದಲ್ಲಿ ಯಾವುದೇ ಸಿಗ್ನಲ್ ಇರುವುದಿಲ್ಲ. ಡಾ.ಅಂಬೇಡ್ಕರ್ ಅವರ ಬದುಕಿನ ಗಾಥೆಯ ಸಂಕ್ಷಿಪ್ತ ಮಾಹಿತಿ, ಪುತ್ಥಳಿ, ಪಾರ್ಲಿಮೆಂಟ್ ಮತ್ತು ಸಂವಿಧಾನ ಗ್ರಂಥದ ಮಾದರಿಯೊಂದಿಗೆ ವೃತ್ತವು ವಿನೂತನವಾಗಿ ನಿರ್ಮಾಣವಾಗಲಿದೆ. ವೃತ್ತದಲ್ಲಿ ಗ್ರೀನ್ ಪಾರ್ಕ್, ರಕ್ಷಣೆಗಾಗಿ ಬ್ಯಾರಿಕೇಡ್ ವಾಲ್ ಸೇರಿದಂತೆ ವಿನೂತನ ರೀತಿಯಲ್ಲಿ ಸಿದ್ಧವಾಗುವ ವೃತ್ತದ ಮಾದರಿ ನಕ್ಷೆಯನ್ನು ಪ್ರದರ್ಶಿಸಲಾಯಿತು.

ವೃತ್ತವು ಅದ್ಭುತವಾಗಿ ನಿರ್ಮಾಣವಾಗುತ್ತಿರುವುದಕ್ಕೆ ನಾವು ಅಭಿನಂದನೆ ತಿಳಿಸುತ್ತೇವೆ. ಡಾ.ಅಂಬೇಡ್ಕರ್ ಅಂದರೆ ನಮಗೆ ಹೋರಾಟದ ಸಂಕೇತವಾಗಿದೆ. ಹೀಗಾಗಿ ಡಾ.ಅಂಬೇಡ್ಕರ್ ಅವರ ಪುತ್ಥಳಿ ಎದುರಿಗೆ ಕನಿಷ್ಟ 500 ಜನರು ಕುಳಿತು ಪ್ರತಿಭಟಿಸುವುದಕ್ಕೆ ನೂತನ ವೃತ್ತದ ಬಳಿಯಲ್ಲಿ ಸ್ಥಳವಕಾಶ ಕಲ್ಪಿಸಬೇಕು ಎಂದು ಎಲ್ಲ ಮುಖಂಡರು ಸಭೆಯಲ್ಲಿ ಮನವಿ ಮಾಡಿದರು.


ಜಿಲ್ಲಾಧಿಕಾರಿ ನಿತೀಶ್ ಕೆ., ಮಾತನಾಡಿ, ನಗರವು ಸುಂದರವಾಗಿ ನಿರ್ಮಾಣವಾಗಬೇಕು ಎಂಬುದು ನಮ್ಮ ಮುಖ್ಯ ಉದ್ದೇಶವಾಗಿದೆ. ಜಾಗತಿಕವಾಗಿ ರಾಯಚೂರ ಗಮನ ಸೆಳೆಯುವ ನಿಟ್ಟಿನಲ್ಲಿ ಯೋಚಿಸಿ, ನಾನಾ ಯೋಜನೆಗಳ ಕಾರ್ಯರೂಪಕ್ಕೆ ಜಿಲ್ಲಾಡಳಿತವು ವಿವಿಧ ಇಲಾಖೆಗಳ ಸಹಯೋಗದಲ್ಲಿ ಮುಂದಾಗುತ್ತಿದೆ. ರಾಯಚೂರ ನಗರದಲ್ಲಿ ಈ ಎರಡೂ ವೃತ್ತಗಳ ನಿರ್ಮಾಣ ಕಾರ್ಯವು ಬರೀ ಜಿಲ್ಲಾಡಳಿತ, ಮಹಾನಗರ ಪಾಲಿಕೆಯ ಕಾರ್ಯವಲ್ಲ; ಇದಕ್ಕೆ ನಗರದ ಎಲ್ಲ ಸಂಘ ಸಂಸ್ಥೆಗಳ ಮುಖಂಡರು, ಗಣ್ಯರು, ಸಾರ್ವಜನಿಕರು ಸಹಕರಿಸಬೇಕು ಎಂದರು.

ಈ ಸಂದರ್ಭದಲ್ಲಿ ಎಸ್ಪಿ ಎಂ,ಪುಟ್ಟಮಾದಯ್ಯ ಎಂ., ಪಾಲಿಕೆಯ ಆಯುಕ್ತ ಜುಬಿನ್ ಮೋಹಪಾತ್ರ, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಾದ ಎಂ ಚಿದಾನಂದ, ಪರಶುರಾಮ ಅರೋಲಿ, ಎಂ ಬಸವರಾಜ ಭಂಡಾರಿ, ಮಂಚಾಲ ಭೀಮಯ್ಯ, ಎಂ ವಸಂತಕುಮಾರ, ಜಿ ಮುದ್ದುಕೃಷ್ಣ, ಎಸ್ ನರಸಿಂಹಲು, ವಿಶ್ವನಾಥ ಹಟ್ಟಿ, ಎನ್ .ಜಂಬಣ್ಣ, ರಂಗ್ ಮುನಿದಾಸ್, ಎಂ ಈರಣ್ಣ, ಭಾಷ್ಕರ್ ರಾಜ್, ಎಸ್.ಮಲ್ಲೇಶಿ ಕೊಲಿಮಿ, ಪ್ರಭು ನಾಯಕ, ಹನುಮೇಶ ಅರೋಲಿ ಸೇರಿ ಅನೇರು ಇದ್ದರು.