ವಿಜಯವಾಣಿ ಸುದ್ದಿಜಾಲ ಧಾರವಾಡ
ನಗರದ ಕೃಷಿ ವಿಶ್ವ ವಿದ್ಯಾಲಯದ ವಿಶ್ರಾಂತ ಕುಲಪತಿ ದಿ. ಡಾ. ಎಸ್.ಎ.ಪಾಟೀಲರ ಜನ್ಮದಿನ ನಿಮಿತ್ತ ಅವರ ಸ್ಮರಣಾರ್ಥ ಡಾ. ಎಸ್.ಡಬ್ಲೂ. ಮೆನಸಿಣಕಾಯಿ ಎಜ್ಯುಕೇಶನ್ ಆಂಡ್ ರಿಸರ್ಚ್ ಪ್ರತಿಷ್ಠಾನ ವತಿಯಿಂದ ಆ. 5ರಂದು ಮಧ್ಯಾಹ್ನ 3 ಗಂಟೆಗೆ ಕೃವಿವಿ ರೈತರ ಜ್ಞಾನಾಭಿವೃದ್ಧಿ ಕೇಂದ್ರದಲ್ಲಿ ವಿಶೇಷ ಉಪನ್ಯಾಸ ಆಯೋಜಿಸಲಾಗಿದೆ.
ಐಸಿಎಆರ್ ಮಾಜಿ ನಿರ್ದೇಶಕ ಹಾಗೂ ಡಿಎಆರ್ಇ ಕಾರ್ಯದರ್ಶಿ ಡಾ. ಎಸ್. ಅಯ್ಯಪ್ಪನ್ ಅತಿಥಿಯಾಗಿ ಆಗಮಿಸುವರು. ಕೃವಿವಿ ಕುಲಪತಿ ಡಾ. ಪಿ.ಎಲ್. ಪಾಟೀಲ ಅಧ್ಯಕ್ಷತೆ ವಹಿಸುವರು. ವಿಶ್ರಾಂತ ಕುಲಪತಿ ಡಾ. ಜೆ.ವಿ. ಗೌಡ, ಡಾ.ಎಸ್.ಎ.ಪಾಟೀಲರ ಪತ್ನಿ ಅನ್ನಪೂರ್ಣ ಪಾಟೀಲ ಉಪಸ್ಥಿತರಿರುವರು ಎಂದು ಪ್ರಕಟಣೆ ತಿಳಿಸಿದೆ.