ವಿಜಯವಾಣಿ ಸುದ್ದಿಜಾಲ ಧಾರವಾಡ
ಕರ್ನಾಟಕ ವಿದ್ಯಾವರ್ಧಕ ಸಂಘವು ಹಿರಿಯ ಸಮಾಜವಾದಿ ದಿ. ರಾಚಪ್ಪ ಹಡಪದ ದತ್ತಿ ನಿಮಿತ್ತ ಜು. 13ರಂದು ಸಂಜೆ 6 ಗಂಟೆಗೆ ಸಂಘದ ರಾ. ಹ. ದೇಶಪಾಂಡೆ ಭವನದಲ್ಲಿ ಉಪನ್ಯಾಸ ಹಾಗೂ ಸನ್ಮಾನ ಸಮಾರಂಭ ಏರ್ಪಡಿಸಿದೆ.
ಪತ್ರಕರ್ತ ಪುಂಡಲೀಕ ಹಡಪದ ಪ್ರಸಕ್ತ ರಾಜಕೀಯ ಮತ್ತು ಸಮಾಜವಾದ ಕುರಿತು ಉಪನ್ಯಾಸ ನೀಡುವರು. ಹಿರಿಯ ಚಿತ್ರಕಲಾವಿದ ಬಾಣದ ಮಾರುತಿ ಗೌರವ ಸನ್ಮಾನ ಸ್ವೀಕರಿಸುವರು. ಚಂದ್ರಕಾಂತ ಬೆಲ್ಲದ ಅಧ್ಯಕ್ಷತೆ ವಹಿಸುವರು. ರವಿರಾಜ ಹಡಪದ ಉಪಸ್ಥಿತರಿರುವರು ಎಂದು ಪ್ರಕಟಣೆ ತಿಳಿಸಿದೆ.