ಬೆಟ್ಟದಪುರ: ಬೆಟ್ಟದಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜನಲ್ಲಿ ಮಂಗಳವಾರ ರಾಜ್ಯಶಾಸ್ತ್ರ ವಿಭಾಗದ ವತಿಯಿಂದ ವಿದ್ಯಾರ್ಥಿಗಳಿಗೆ ವಿಶೇಷ ಉಪನ್ಯಾಸ ಆಯೋಜಿಸಲಾಗಿತ್ತು.
ಹನಗೂಡು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಬಿ.ಟಿ.ನವೀನ್ ಕುಮಾರ್ ಮಾತನಾಡಿ, ಭಾರತ ಸ್ವಾತಂತ್ರೃ ನಂತರದ ಎಲ್‌ಜಿಬಿಟಿಕ್ಯೂ+ ಚಳವಳಿ ಎಂಬ ವಿಷಯದ ಕುರಿತು ವಿದ್ಯಾರ್ಥಿಗಳಿಗೆ ವಿಶೇಷ ಉಪನ್ಯಾಸ ನೀಡಿದರು. ಜತೆಗೆ ಎಲ್‌ಜಿಬಿ ವರ್ಗಗಳ ಪ್ರಸ್ತುತ ಅವರ ಸ್ಥಾನಮಾನ ಮತ್ತು ಭಾರತೀಯ ಸಮಾಜದಲ್ಲಿ ಸಾಂಸ್ಕೃತಿಕ ಹಾಗೂ ಧಾರ್ಮಿಕ ಚೌಕಟ್ಟಿನೊಳಗೆ ಅವರ ಹಕ್ಕೊತ್ತಾಯಗಳು ಹಾಗೂ ಚಳವಳಿಯ ವಿಶಿಷ್ಟ ಆಯಾಮಗಳ ಬಗ್ಗೆ ವಿದ್ಯಾರ್ಥಿಗಳೊಡನೆ ಚರ್ಚಿಸಿದರು.
ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲ ಭರತ್‌ರಾಜ್ ಅರಸು, ಅಧ್ಯಾಪಕರಾದ ಡಾ.ಮಂಜು ಎಸ್.ಕೆ, ರಘುವೀರ್, ಐಕ್ಯೂಎಸಿ ಸಹ ಸಂಚಾಲಕಿ ಪ್ರೊ.ಶಾಂಭವಿ, ಪ್ರೊ.ಪದ್ಮಾವತಿ ಇದ್ದರು.