ಜಿಲ್ಲೆ

ತಿಂಗಳ ಸಾಹಿತ್ಯ ಉಪನ್ಯಾಸ

Dharwada - Basavaraj Idli

ಹುಬ್ಬಳ್ಳಿ: ಹೂಬಳ್ಳಿ ಲೇಖಕಿಯರ ಬಳಗದ ವತಿಯಿಂದ ಮೇ ತಿಂಗಳ ಸಾಹಿತ್ಯಿಕ ಕಾರ್ಯಕ್ರಮವನ್ನು ಮೇ 18ರಂದು ಬೆಳಗ್ಗೆ 10.30ಕ್ಕೆ ಇಲ್ಲಿಯ ದಾನೇಶ್ವರಿ ನಗರದಲ್ಲಿರುವ ಸುಕೃತಿ ವಿಜ್ಞಾನ ಮಹಾವಿದ್ಯಾಲಯದಲ್ಲಿ ಏರ್ಪಡಿಸಲಾಗಿದೆ.

ಬಸವಣ್ಣ ಏಕೆ ಬೇಕು? ವಿಷಯ ಕುರಿತು ಸಹಾಯಕ ಕೃಷಿ ನಿರ್ದೇಶಕ ಹಾಗೂ ಸಾಹಿತಿ ಚೆನ್ನಪ್ಪ ಅಂಗಡಿ ಹಾಗೂ ಗೀತಾ ಪಾಟೀಲ್ ಅವರು ಉಪನ್ಯಾಸ ನೀಡುವರು ಎಂದು ಬಳಗದ ಅಧ್ಯಕ್ಷೆ ಸರೋಜಾ ಮೇಟಿ, ಕಾರ್ಯದರ್ಶಿ ಸುಜಾತಾ ಹೆಬ್ಬಾಳದ ತಿಳಿಸಿದ್ದಾರೆ.