ಮುಜುಂಗಾವು ವಿದ್ಯಾಪೀಠದಲ್ಲಿ ಪರಿಸರ ದಿನ ಆಚರಿಸಲಾಯಿತು.  
ಜಿಲ್ಲೆ

ಉಳಿವಿಗೆ ಮೂಲವಾದ ವೃಕ್ಷಗಳ ಹನನ : ಜಯಂತ ಪಾಟಾಳಿ ಕಳವಳ

ಸೌಮ್ಯ ಆರ್

ಕುಂಬಳೆ: ವಿಶ್ವಪರಿಸರ ದಿನಾಚರಣೆಯ ಭಾಗವಾಗಿ ಮುಜುಂಗಾವು ಶ್ರೀ ಭಾರತೀ ವಿದ್ಯಾಪೀಠದಲ್ಲಿ ಗಿಡಗಳನ್ನು ನೆಟ್ಟು, ವಿದ್ಯಾರ್ಥಿಗಳಿಗೆ ಪರಿಸರದ ಬಗ್ಗೆ ವಿಶೇಷ ಮಾಹಿತಿ ನೀಡಲಾಯಿತು.

ಎಡನಾಡು ಕಣ್ಣೂರು ಸೇವಾಸಹಕಾರಿ ಬ್ಯಾಂಕ್‌ನ ಅಧ್ಯಕ್ಷ ಜಯಂತ ಪಾಟಾಳಿ ಗಿಡ ನೆಟ್ಟು ಮಾತನಾಡಿ, ಅಭಿವೃದ್ಧಿಯ ಹೆಸರಿನಲ್ಲಿ ನಮ್ಮ ಪರಿಸರ ಮಲಿನಗೊಳ್ಳುತ್ತಿದೆ. ನಮ್ಮ ಉಳಿವಿಗೆ ಕಾರಣವಾದ ಮರಗಳ ನಾಶವಾಗುತ್ತಿದೆ. ವಿದ್ಯಾರ್ಥಿಗಳು ಪರಿಸರ ಸ್ನೇಹಿಗಳಾಗಬೇಕು ಎಂದರು.

ಆಡಳಿತ ಸಮಿತಿ ಕಾರ್ಯದರ್ಶಿ ಶ್ಯಾಮರಾಜ ದೊಡ್ಡಮಾಣಿ ಉಪಸ್ಥಿತರಿದ್ದರು. ಮುಖ್ಯಶಿಕ್ಷಕ ಶ್ಯಾಮ್ ಭಟ್ ದರ್ಭೆಮಾರ್ಗ ಸ್ವಾಗತಿಸಿದರು. ಸಂಸ್ಕೃತ ಶಿಕ್ಷಕ ಬಾಲಕೃಷ್ಣ ಶರ್ಮ ಅನಂತಪುರ ವಂದಿಸಿದರು. ಸಮಾಜ ವಿಜ್ಞಾನ ಸಂಘದ ಕಾರ್ಯದರ್ಶಿ, ಶಿಕ್ಷಕ ಹರಿಪ್ರಸಾದ್ ನಿರೂಪಿಸಿದರು.