ಜಿಲ್ಲೆ

ಮಜೂರಿನಲ್ಲಿ ಅಂಗವಿಕಲರ ವಿಶೇಷ ಗ್ರಾಮಸಭೆ

ಇಂದಿರಾ ಎನ್ ಕೆ

ವಿಜಯವಾಣಿ ಸುದ್ದಿಜಾಲ ಪಡುಬಿದ್ರಿ

ಮಜೂರು ಗ್ರಾಮ ಪಂಚಾಯಿತಿ ವತಿಯಿಂದ ಅಂಗವಿಕಲರ ವಿಶೇಷ ಗ್ರಾಮಸಭೆ ಗ್ರಾಪಂ ಸಭಾಭವನದಲ್ಲಿ ಗುರುವಾರ ನಡೆಯಿತು.

ಜಿಲ್ಲಾ ವಿಕಲಚೇತನರ ಪುನರ್ವಸತಿ ಕೇಂದ್ರದ ಮನೋತಜ್ಞ ವೈಶಾಖ್ ವಾರಂಬಳ್ಳಿ ಅಂಗವಿಕಲರ ಮಾನಸಿಕ ಆರೋಗ್ಯ ಹಾಗೂ ಪುನರ್ವಸತಿ ಕೇಂದ್ರದಿಂದ ದೊರೆಯುವ ಸೌಲಭ್ಯಗಳ ಬಗ್ಗೆ ವಿವರಿಸಿದರು. ಗ್ರಾಪಂ ಶೇ.5ರ ನಿಧಿ ಖರ್ಚು ಕುರಿತು ಹಾಗೂ ಗಾ.್ರಪಂನಲ್ಲಿ ಖಾಲಿಯಿರುವ ವಿಆರ್‌ಡಬ್ಲುೃ ನೇಮಕಾತಿ ಬಗ್ಗೆ ಚರ್ಚಿಸಲಾಯಿತು.

ಗ್ರಾಪಂ ಅಧ್ಯಕ್ಷ ಪ್ರಸಾದ್ ಶೆಟ್ಟಿ ವಳದೂರು ಅಧ್ಯಕ್ಷತೆ ವಹಿಸಿದ್ದರು. ಗ್ರಾಪಂ ಉಪಾಧ್ಯಕ್ಷೆ ಮಂಜುಳಾ ಆಚಾರ್ಯ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿಲಾಸಿನಿ, ಸದಸ್ಯರು, ಗ್ರಾಮ ಆಡಳಿತ ಆಧಿಕಾರಿ ಶ್ರೀಕಾಂತ್, ಸಮುದಾಯ ಆರೋಗ್ಯ ಅಧಿಕಾರಿ ಪೂಜಾ, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು, ಅಂಗವಿಕಲರು ಉಪಸ್ಥಿತರಿದ್ದರು. ಕಾರ್ಯದರ್ಶಿ ಪ್ರಸಾದ್ ಭಂಡಾರಿ ಸ್ವಾಗತಿಸಿದರು.

ಅಂಗವಿಕಲ ಸೌಲಭ್ಯಗಳ ಮಾಹಿತಿ

ಸರ್ಕಾರದಿಂದ ಅಂಗವಿಕಲರಿಗೆ ದೊರೆಯುವ ಸೌಲಭ್ಯಗಳು, ವಿಕಲಚೇತನರ ರಕ್ಷಣೆ, ಕಾನೂನು ಮತ್ತು ಅರಿವು, ಇಲಾಖೆಯಿಂದ ಸಿಗುವ ಅನುದಾನಗಳ ಬಗ್ಗೆ ಮಾಹಿತಿ ನೀಡುವುದರ ಜತೆಗೆ ಫಲಾನುಭವಿಗಳು ಸರ್ಕಾರದ ಸವಲತ್ತುಗಳ ಪಡೆದುಕೊಳ್ಳುವಂತೆ ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ತಾಲೂಕು ಸಂಯೋಜಕ ವೈ.ಮಧುಸೂದನ್ ರಾವ್ ಕರೆ ನೀಡಿದರು.