ಜಿಲ್ಲೆ

ತೋಕೂರು ದೇವಸ್ಥಾನದಲ್ಲಿ ಭಕ್ತರ ವಿಶೇಷ ಸಭೆ

ಸೌಮ್ಯ ಆರ್

ಹಳೆಯಂಗಡಿ: ತೋಕೂರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ದೇವಳದ ಮೇಲ್ಛಾವಣಿಗೆ ತಗಡು ಚಪ್ಪರ ಅಳವಡಿಸುವ ಬಗ್ಗೆ ಊರಪರವೂರ ಭಕ್ತರ ವಿಶೇಷ ಸಭೆ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಗುರುರಾಜ್ ಎಸ್.ಪೂಜಾರಿ ಅಧ್ಯಕ್ಷತೆಯಲ್ಲಿ ನಡೆಯಿತು.

ದೇವಳಕ್ಕೆ ಭೇಟಿ ನೀಡುವ ಭಕ್ತರಿಗೆ ಬಿಸಿಲು ಹಾಗೂ ಮಳೆಯಿಂದ ತೊಂದರೆಯಾಗುವ ಕಾರಣ ದೇವಳದ ಹೊರಾಂಗಣ ಹಾಗೂ ಒಳಾಂಗಣದ ಮೇಲ್ಛಾವಣಿಗೆ ಶಾಶ್ವತ ತಗಡು ಚಪ್ಪರವನ್ನು ದಾನಿಗಳ ಮುಖಾಂತರ ಅಳವಡಿಸುವ ಬಗ್ಗೆ ನಿರ್ಣಯಿಸಲಾಯಿತು.

ತೋಕೂರು ಎಸ್ಕೋಡಿ ಕುಲಾಲ ಸುಧಾರಕ ಸಂಘ ದೇವಳದ ಒಳಾಂಗಣ ಮೇಲ್ಛಾವಣಿ ಸಂಪೂರ್ಣ ಖರ್ಚು ಭರಿಸುವುದಾಗಿ ಆಶ್ವಾಸನೆ ನೀಡಿದರು. ಭಕ್ತರಿಂದ ಒಂದು ಶೀಟಿನ ಬೆಲೆ ರೂ.2000(ಟ್ರಸ್ ಸೇರಿ) ಸ್ವೀಕರಿಸುವುದೆಂದು ನಿರ್ಣಯಿಸಲಾಯಿತು.

ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಪುರುಷೋತ್ತಮ ಕೋಟ್ಯಾನ್, ಸಂಪತ್ ಜೆ.ಶೆಟ್ಟಿ, ಅಶೋಕ್ ಕುಂದರ್, ವಿಶ್ವನಾಥ್, ಸವಿತಾ ಶರತ್, ಜೀರ್ಣೋದ್ಧಾರ ಸಮಿತಿ ಹರಿದಾಸ್ ಭಟ್, ಹರಿಪ್ರಸಾದ್ ಶೆಟ್ಟಿ ತೋಕೂರು ಗುತ್ತು ಹೊಸಮನೆ, ವಿಜಯ ಕುಮಾರ್ ರೈ, ಮೋಹನ್ ದಾಸ್, ಸುಗಂಧಿ ಡಿ.ಕೊಂಡಾಣ, ಪಡುಪಣಂಬೂರು ಪಂಚಾಯಿತಿ ಅಧ್ಯಕ್ಷೆ ಕುಸುಮಾ ಚಂದ್ರಶೇಖರ್, ಉಪಾಧ್ಯಕ್ಷ ಹೇಮನಾಥ ಅಮೀನ್, ಜಿಪಂ ಮಾಜಿ ಉಪಾಧ್ಯಕ್ಷೆ ಕಸ್ತೂರಿ ಪಂಜ, ಗ್ರಾಮಸ್ಥರಾದ ಹರೀಶ್ ಶೆಟ್ಟಿ, ಲೋಕಯ್ಯ ಸಾಲ್ಯಾನ್, ಗಣೇಶ್ ಜಿ.ಬಂಗೇರ, ವಿಪುಲ ಡಿ.ಶೆಟ್ಟಿಗಾರ್, ವಿವಿಧ ಸಂಘ-ಸಂಸ್ಥೆಗಳ ಅಧ್ಯಕ್ಷರು, ಪದಾಧಿಕಾರಿಗಳು, ಸದಸ್ಯರು, ಭಕ್ತರು ಹಾಜರಿದ್ದರು.

ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಸಂಪತ್ ಶೆಟ್ಟಿ ತೋಕೂರು ಗುತ್ತು ಕಾರ್ಯಕ್ರಮ ನಿರೂಪಿಸಿದರು. ಸಮಿತಿ ಸದಸ್ಯ ಪುರುಷೋತ್ತಮ ಕೋಟ್ಯಾನ್ ವಂದಿಸಿದರು.