ಜಿಲ್ಲೆ

ಮೈಸೂರಿನ ಮಾಧವ ಕೃಪಾದಲ್ಲಿ ವಿಶಿಷ್ಠ ಗಣೇಶೋತ್ಸವ

ಮೈಸೂರು: ನಗರದ ಶ್ರೀಮಾಧವ ಕೃಪಾ ಗಣೇಶೋತ್ಸವ ಈ ಬಾರಿಯೂ ತನ್ನ ವೈಶಿಷ್ಟ್ಯತೆ ಕಾರಣಕ್ಕೆ ಜನಮನ ಸೆಳೆಯುತ್ತಿದೆ.
ಪರಿಸರ ಸ್ನೇಹಿ ಗಣೇಶನ ವಿಗ್ರಹ ಒಂದೆಡೆಯಾದರೆ, ಪ್ರತಿದಿನ ಸಂಜೆ ಸ್ಥಳೀಯ ಕಲಾವಿದರಿಂದ ಸಾಂಸ್ಕೃತಿಯ ಕಾರ್ಯಕ್ರಮಗಳು, ಪ್ರಸಾದ ವಿತರಣೆಯೊಂದಿಗೆ ಜೆಎಲ್‌ಬಿ ರಸ್ತೆಯ ಮಾಧವ ಕೃಪಾ ಅವರಣದಲ್ಲಿ ಸೃಷ್ಟಿಸಲಾಗಿರುವ ಪ್ರದರ್ಶಿನಿ ( ರಾಷ್ಟ್ರೀಯ ಸ್ವಯಂ ಸೇವಕ ಸಂಘ ಬೆಳೆದು ಬಂದ ದಾರಿ, ಅದರ ಸೇವಾ ಪಥ, ಸದ್ದಿಲ್ಲದ ಸಾಧನೆ, ಸಂಘದ ಇತಿಹಾಸದ ಮೈಲಿಗಲ್ಲುಗಳ ವಾಕ್ ಥ್ರೂ) ಜನರ ಮೆಚ್ಚುಗೆಗಳಿಸಿವೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಬಗ್ಗೆ ಗಣ್ಯಾತಿಗಣ್ಯರ ಅಭಿಪ್ರಾಯವೂ ಇಲ್ಲಿದೆ. ಸಂಘದ ಬಗ್ಗೆ ಪೂರ್ವಗ್ರಹ ಇರುವವರ ಸಂದೇಹಗಳಿಗೂ ಪ್ರದರ್ಶಿನಿಯಲ್ಲಿ ಉತ್ತರವಿದೆ.
ಧಾರ್ಮಿಕ ಭಾವನೆ ಜಾಗೃತಗೊಳಿಸಿ:
ಪ್ರದರ್ಶಿನಿಗೆ ಚಾಲನೆ ನೀಡಿ ಮಾತನಾಡಿದ ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಸಂಘದ ಸಂದೇಶವನ್ನು ಎಲ್ಲೆಡೆ ಪಸರಿಸಲು ನಾವೆಲ್ಲರೂ ಶ್ರಮಿಸಬೇಕಿದೆ. ಜನರಲ್ಲಿ ಕಡಿಮೆಯಾಗುತ್ತಿರುವ ಧಾರ್ಮಿಕ ಭಾವನೆಗಳನ್ನು ಜಾಗೃತಗೊಳಿಸಬೇಕಿದೆ ಎಂದು ಹೇಳಿದರು.
ಖ್ಯಾತ ಶಿಲ್ಪಿ ಅರುಣ್ ಯೋಗಿರಾಜ್ ಮಾತನಾಡಿ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಾಧನೆ ಎಲ್ಲರಿಗೂ ಆದರ್ಶ ಎಂದರು. ಆರ್‌ಎಸ್ ಎಸ್ ಮುಖಂಡ ಮಾ.ವೆಂಕಟರಾಮ ಮಾತನಾಡಿ, ಮಾಧವ ಕೃಪಾ ಗಣೇಶೋತ್ಸವದ ಅಂಗವಾಗಿ ಪ್ರತಿದಿನ ಸಂಜೆ ಸ್ಥಳೀಯ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ, ಬಳಿಕ ಪ್ರಸಾದ ವಿತರಣೆ ಮಾಡಲಾಗುತ್ತಿದೆ. ಸೆ. 11ರ ಮಧ್ಯಾಹ್ನದ ಬಳಿಕ ನೂರಕ್ಕೂ ಹೆಚ್ಚು ಸಾರ್ವಜನಿಕ ಗಣೇಶೋತ್ಸವ ಸಮಿತಿಯ ವಿಗ್ರಹಗಳೊಂದಿಗೆ ಈ ಗಣೇಶನನ್ನೂ ಕಾವೇರಿ ನದಿಯಲ್ಲಿ ವಿಸರ್ಜಿಸಲಾಗುವುದು ಎಂದರು.ಬಿಜೆಪಿ ನಗರಾಧ್ಯಕ್ಷರಾದ ಎಲ್.ನಾಗೇಂದ್ರ ಇತರರು ಇದ್ದರು.