ಹುಬ್ಬಳ್ಳಿ : ದೀಪಾವಳಿ ಹಾಗೂ ಛತ್ ಹಬ್ಬದ ಸಂದರ್ಭದಲ್ಲಿ ಪ್ರಯಾಣಿಕರ ದಟ್ಟಣೆ ನಿಯಂತ್ರಣಕ್ಕಾಗಿ ನೈಋತ್ಯ ರೈಲ್ವೆ ವಲಯವು ಎಸ್ಎಸ್ಎಸ್ ಹುಬ್ಬಳ್ಳಿ-ಕೊಲಂ, ಎಸ್ಎಸ್ಎಸ್ ಹುಬ್ಬಳ್ಳಿ-ಮುಜಾಫರ್ ಮಧ್ಯೆ ಒಂದು ಟ್ರಿಪ್ ವಿಶೇಷ ರೈಲು ಸಂಚಾರ ಆರಂಭಿಸಿದೆ.
ಎಸ್ಎಸ್ಎಸ್ ಹುಬ್ಬಳ್ಳಿ-ಕೊಲಂ ಸ್ಪೇಷಲ್ ಎಕ್ಸ್ಪ್ರೆಸ್ ರೈಲು ಅ. 26ರಂದು ಮಧ್ಯಾಹ್ನ 3.15ಕ್ಕೆ ಎಸ್ಎಸ್ಎಸ್ ಹುಬ್ಬಳ್ಳಿ ನಿಲ್ದಾಣದಿಂದ ಹೊರಟು, ಮಾರನೇ ದಿನ ಸಂಜೆ 5.10ಕ್ಕೆ ಕೊಲಂ ನಿಲ್ದಾಣ ತಲುಪುತ್ತದೆ. ಮರಳಿ ಅ. 27ರಂದು ರಾತ್ರಿ 8.30ಕ್ಕೆ ಕೊಲಂ ನಿಲ್ದಾಣದಿಂದ ಹೊರಡುವ ರೈಲು, ಮಾರನೇ ದಿನ ರಾತ್ರಿ 8.45ಕ್ಕೆ ಎಸ್ಎಸ್ಎಸ್ ಹುಬ್ಬಳ್ಳಿ ನಿಲ್ದಾಣ ತಲುಪುತ್ತದೆ.
ಎಸ್ಎಸ್ಎಸ್ ಹುಬ್ಬಳ್ಳಿ-ಮುಜಾಫರ್ ಸ್ಪೇಷಲ್ ಎಕ್ಸ್ಪ್ರೆಸ್ ರೈಲು ನ. 4ರಂದು ಸಂಜೆ 5.20ಕ್ಕೆ ಎಸ್ಎಸ್ಎಸ್ ಹುಬ್ಬಳ್ಳಿ ನಿಲ್ದಾಣದಿಂದ ಹೊರಟು, ನ. 6ರಂದು ಸಂಜೆ 4 ಗಂಟೆಗೆ ಮುಜಾಫರ್ ನಿಲ್ದಾಣ ತಲುಪುತ್ತದೆ. ಮರಳಿ ಈ ರೈಲು ಮುಜಾಫರ್ನಿಂದ ನ. 9ರಂದು ಮಧ್ಯಾಹ್ನ 1.15ಕ್ಕೆ ಹೊರಟು, 11ರಂದು ಬೆಳಗ್ಗೆ 10.30ಕ್ಕೆ ಎಸ್ಎಸ್ಎಸ್ ಹುಬ್ಬಳ್ಳಿ ನಿಲ್ದಾಣ ತಲುಪುತ್ತದೆ.