ಜಿಲ್ಲೆ

ಚೌಡೇಶ್ವರಿ ಅಮ್ಮನವರಿಗೆ ಆಷಾಢ ವಿಶೇಷ ಪೂಜೆ

ಪ್ರಸಿನ್ ಕೆ.ಆರ್

ಬೇಲೂರು: ಬೇಲೂರು ಪಟ್ಟಣದ ದೇವಾಂಗ ಬೀದಿಯಲ್ಲಿರುವ ಶ್ರೀ ಚೌಡೇಶ್ವರಿ ಅಮ್ಮನವರ ದೇವಸ್ಥಾನದಲ್ಲಿ ಶುಕ್ರವಾರ ಆಷಾಢ ಮಾಸದ ವಿಶೇಷ ಪೂಜೆಯನ್ನು ದೇಗುಲ ಸಮಿತಿ ಹಾಗೂ ದೇವಾಂಗ ಸಂಘದಿಂದ ನೂರಾರು ಭಕ್ತರ ಸಮ್ಮುಖದಲ್ಲಿ ನೆರವೇರಿಸಲಾಯಿತು.

ದೇವಿಗೆ ಪುಷ್ಪಗಳಿಂದ ಅಲಂಕರಿಸಿ, ಅಭಿಷೇಕ, ಪಂಚಾಮೃತಾಭಿಷೇಕ, ಗಂಗಾಭಿಷೇಕ ನಂತರ ವಿಶೇಷ ಪುಷ್ಪಾಲಂಕಾರ ಮಾಡಿ, ಕುಂಕುಮ ಸೇವೆಯೊಂದಿಗೆ ಅಮ್ಮನವರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.

ಚೌಡೇಶ್ವರಿ ಭಜನಾ ಮಹಿಳಾ ಮಂಡಳಿಯಿಂದ ಲಕ್ಷ್ಮೀ ಸಹಸ್ರ ನಾಮ, ಭಜನೆ ಮತ್ತು ನೂರೊಂದು ನಿಂಬೆ ಹಣ್ಣಿನ ಹಣತೆಯಿಂದ ದೇವಿಗೆ ಆರತಿ ಎತ್ತಿ ಪೂಜಿಸಲಾಯಿತು. ಉತ್ತಮ ಮಳೆ, ಬೆಳೆಗಾಗಿ ಭಕ್ತರು ಪ್ರಾರ್ಥಿಸಿದರು.

ದೇವಾಂಗ ಸಂಘದ ಗೌರವ ಅಧ್ಯಕ್ಷ ಗಿರಿಯಪ್ಪಶೆಟ್ಟಿ, ರಂಗನಾಥ್, ಪ್ರಸಾದ್, ವಿನೇಶ್, ಮಂಜುನಾಥ್ ಇತರರು ಇದ್ದರು.