ಜಿಲ್ಲೆ

ಕನ್ನಡ ನಾಡು ನುಡಿಗೆ ಸ್ಪೀಕರ್ ಉತ್ತೇಜನ

Manikya M

ಉಳ್ಳಾಲ: ಕೆಂಗಲ್ ಹನುಮಂತಯ್ಯ ದೂರದೃಷ್ಟಿಯುಳ್ಳ ನಾಯಕರಾಗಿ, ತಾವು ಮುಖ್ಯಮಂತ್ರಿಯಾಗಿದ್ದಾಗ ವಿಧಾನಸೌಧವನ್ನು ಸುಂದರವಾಗಿ ನಿರ್ವಾಣ ವಾಡಿ ಹೆಸರಾದವರು. ಅವರ ಹೆಸರಿನ ಪ್ರಶಸ್ತಿ ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಅವರಿಗೆ ಅರ್ಹವಾಗಿಯೇ ಸಂದಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಉಳ್ಳಾಲ ತಾಲೂಕು ಅಧ್ಯಕ್ಷ ಡಾ.ಧನಂಜಯ ಕುಂಬ್ಳೆ ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ತಿನಿಂದ ನೀಡುವ ಕೆಂಗಲ್ ಹನುಮಂತಯ್ಯ ದತ್ತಿನಿಧಿ ಪ್ರಶಸ್ತಿಗೆ ಭಾಜನರಾಗಿರುವ ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಅವರಿಗೆ ಕಸಾಪ ಉಳ್ಳಾಲ ತಾಲೂಕು ಟಕ ವತಿಯಿಂದ ಕೊಣಾಜೆಯಲ್ಲಿ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ವಾತನಾಡಿದರು.

ವಿಧಾನಸೌಧವನ್ನು ಆಕರ್ಷಕಗೊಳಿಸುವ, ಜನಸಾವಾನ್ಯರಿಗೆ ಹತ್ತಿರ ವಾಡುವ ಜನಮುಖಿ ನಾಯಕರಾಗಿ ಖಾದರ್ ಮೂಡಿಬಂದಿದ್ದಾರೆ. ಇತ್ತೀಚೆಗೆ ವಿಧಾನಸೌಧದಲ್ಲಿ ಪುಸ್ತಕ ಮೇಳ, ಸಾಹಿತ್ಯ ಚರ್ಚೆ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಕನ್ನಡ ನಾಡು ನುಡಿಗೆ ಉತ್ತೇಜನ ನೀಡಿದ್ದಾರೆ ಎಂದರು.

ಸ್ಪೀಕರ್ ಯು.ಟಿ. ಖಾದರ್ ಅವರನ್ನು ಸನ್ಮಾನಿಸಲಾಯಿತು. ಕನ್ನಡ ಸಾಹಿತ್ಯ ಪರಿಷತ್ ಉಳ್ಳಾಲ ತಾಲೂಕು ಗೌರವ ಕಾರ್ಯದರ್ಶಿ ರವೀಂದ್ರ ರೈ ಕಲ್ಲಿವಾರ್, ಜಿಲ್ಲಾ ಸಂಟನಾ ಕಾರ್ಯದರ್ಶಿ ಚಂದ್ರಹಾಸ ಶೆಟ್ಟಿ ದೇರಳಕಟ್ಟೆ, ಮುಖಂಡರಾದ ಪ್ರಸಾದ್ ರೈ ಕಲ್ಲಿವಾರ್, ಅಬ್ದುಲ್ ರಹಿವಾನ್ ಕೋಡಿಜಾಲ್, ಸುರೇಂದ್ರ ರೈ ಗ್ರಾಮಚಾವಡಿ, ಉಳ್ಳಾಲ ಕ.ಸಾ.ಪ. ಸಂಟನಾ ಕಾರ್ಯದರ್ಶಿ ರಾಧಾಕೃಷ್ಣ ರಾವ್ ಉಪಸ್ಥಿತರಿದ್ದರು. ಶಿಕ್ಷಕ ತ್ಯಾಗಂ ಹರೇಕಳ ನಿರೂಪಿಸಿದರು.

ಹಿರಿಯರು ಬದುಕಿದ ದಾರಿ ನಮಗೆ ಪ್ರೇರಣೆ. ಕೆಂಗಲ್ ಹನುಮಂತಯ್ಯ ನಾಡು ಕಂಡ ಮುತ್ಸದ್ಧಿ ನಾಯಕ, ಅವರ ಹೆಸರಿನ ಪ್ರಶಸ್ತಿ ಬಂದಿರುವುದಕ್ಕೆ ಸಂತೋಷವಾಗಿದೆ. ಯು.ಟಿ.ಖಾದರ್, ವಿಧಾನ ಸಭಾಧ್ಯಕ್ಷ.