ಜಿಲ್ಲೆ

ಸಾರ್ವಜನಿಕರೊಂದಿಗೆ ಪ್ರೀತಿಯಿಂದ ಮಾತಾಡಿ

ಕೋಲಾರ ಡೆಸ್ಕ್

ಶ್ರೀನಿವಾಸಪುರ: ಸಾರ್ವಜನಿಕರೊಂದಿಗೆ ಪ್ರೀತಿಯಿಂದ ಮಾತಾಡಿ ನಗು ನಗುತ್ತಾ ಅವರ ಕೆಲಸ ಕಾರ್ಯಗಳನ್ನು ಮಾಡಿಕೊಡಬೇಕು. ಬಡವರ ಸೇವೆ ಮಾಡಿ ನಿಮಗೆ ಒಳ್ಳೆಯದು ಆಗುತ್ತದೆ ಎಂದು ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಸೂಚಿಸಿದರು.

ಪಟ್ಟಣದ ತಹಸೀಲ್ದಾರ್​ ಕಚೇರಿಯಲ್ಲಿ ಮಂಗಳವಾರ ಗ್ರಾಮ ಆಡಳಿತಗಾರರಿಗೆ ಲ್ಯಾಪ್​ಟ್ಯಾಪ್​ ವಿತರಿಸಿ ಮಾತನಾಡಿದ ಅವರು, ಲ್ಯಾಪ್​ಟಾಪ್​ ಇರುವುದರಿಂದ ನಿಮ್ಮ ಕೆಲಸ ಕಾರ್ಯಗಳನ್ನ ಶೀಘ್ರ ಮುಗಿಸಬಹುದು. ಇರುವ ಜಾಗದಲ್ಲಿಯೇ ಸಾರ್ವಜನಿಕರ ಕೆಲಸವನ್ನು ವಿಲೇವಾರಿ ಮಾಡುಬಹುದಾಗಿದೆ. ದಾಖಲೆಗಳಿಗೆ ಸಂಬಂಧಿಸಿದಂತೆ ಜಟಿಲವಾದ ಸಮಸ್ಯೆಗಳನ್ನು ಸಾಧ್ಯವಾದಷ್ಟು, ಸುಲಭ ರೀತಿಯಲ್ಲಿ ಮಾಡುವ ವ್ಯವಸ್ಥೆ ಮಾಡಿಕೊಡಿ ಎಂದರು.

ತಾಲೂಕಿನ ಹಳ್ಳಿಗಾಡಿನ ಪ್ರದೇಶದಲ್ಲಿ ಶೇ.99 ಬಡವರಿದ್ದು, ಎಸ್​ಸಿ, ಎಸ್​ಟಿ ಜನಾಂಗ ಸೇರಿ ಎಲ್ಲ ಸಮುದಾಯಗಳಲ್ಲಿ ಬಡವರು ಇದ್ದು, ಸಾರ್ವಜನಿಕರು ಅರ್ಜಿಗಳನ್ನು ಸಲ್ಲಿಸಿದ ತಕ್ಷಣ ಕಾರ್ಯಾನೋಪಕರಾಗಿ ಸಾರ್ವಜನಿಕರ ಕೆಲಸ ಕಾರ್ಯಗಳನ್ನು ಶೀಘ್ರವಾಗಿ ಮುಗಿಸಿಕೊಡುವಂತೆ ತಿಳಿಸಿದರು.

ಕ್ಷೇತ್ರದಲ್ಲಿ ಬಹುತೇಕ ಬಡ ಕುಟುಂಬಗಳ ಇದ್ದು, ರೈತಾಪಿ ವರ್ಗದವರ ಹಾಗೂ ಸಾರ್ವಜನಿಕರ ಕೆಲಸ ಕಾರ್ಯಗಳನ್ನು ಕಚೇರಿಗಳಿಗೆ ಅಲಿಸದೆ ಅತಿ ಶೀಘ್ರವಾಗಿ ಸಾರ್ವಜನಿಕರ ಕೆಲಸ ಕಾರ್ಯಗಳನ್ನು ಮಾಡಿಕೊಡುವಂತೆ ಸೂಚಿಸಿದರು.

ತಹಸೀಲ್ದಾರ್​ ಜಿ.ಎನ್​.ಸುದೀಂದ್ರ ಮಾತನಾಡಿ, ತಾಲೂಕಿನ 22 ಗ್ರಾಮ ಆಡಳಿತ ಅಧಿಕಾರಿಗಳ ಪೈಕಿ 16 ಗ್ರಾಮ ಆಡಳಿತ ಅಧಿಕಾರಿಗಳಿಗೆ ಲ್ಯಾಪ್​ಟಾಪ್​ ವಿತರಣೆ ಮಾಡಿದ್ದು, ಉಳಿದವರಿಗೆ ಮುಂದಿನ ದಿನಗಳಲ್ಲಿ ವಿತರಿಸಲಾಗುವುದು ಎಂದರು.